ಕಾವೇರಿ ನೀರು ಸಂಕಷ್ಟ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಕರೆದ ಸರ್ವಪಕ್ಷ ಸಭೆಯಲ್ಲಿ ಸುಮಲತಾ ಅಂಬರೀಶ್ ಮತ್ತು ಪ್ರತಾಪ್ ಸಿಂಹ ಸಹ ಭಾಗಿಯಾದರು!
ಸುಮಲತಾ ಬಿಜೆಪಿ ಕಡೆ ವಾಲುವ ಮೊದಲು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಕಳಪೆ ಕಾಮಗಾರಿ ಸಂಬಂಧಿಸಿದಂತೆ ಅವರ ಮತ್ತು ಪ್ರತಾಪ್ ಸಿಂಹ ನಡುವೆ ವಾಗ್ದಾಳಿ ನಡೆಯುತಿತ್ತು. ಹಾಗಾಗಿ, ಅವರು ಪರಸ್ಪರ ಎದುರಾದಾಗ ಅವರಿಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ನೋಡುವ ಕಾತುರ ಎಲ್ಲರಿಗೂ ಇರುತ್ತದೆ. ಆದರೆ, ಇಂಥ ಸಂದರ್ಭಗಳಲ್ಲಿ ಅವರು ಒಬ್ಬರನ್ನೊಬ್ಬರು ಅವಾಯ್ಡ್ ಮಾಡುವ ಪ್ರಯತ್ನ ಮಾಡುತ್ತಾರೆ.
ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡುಗೆ ಹರಿಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ (CWRC) ಹೊರಡಿಸಿರುವ ಆದೇಶದಿಂದ ಚಿಂತಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪರಿಹಾರ ಕಂಡಿಕೊಳ್ಳಲು ಮತ್ತಿ ಬೇರೆ ಪಕ್ಷಗಳ ನಾಯಕರ ಅನಿಸಿಕೆ ತಿಳಿಯಲು ಇಂದು ಸರ್ವಪಕ್ಷ ಸಭೆ ಕರೆದಿದ್ದರು. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಚಿವ ಸಂಪುಟ ಹಲವಾರು ಮಂತ್ರಿಗಳಲ್ಲದೆ, ರಾಜ್ಯದ ಸಂಸತ್ ಸದಸ್ಯರು, ರಾಜ್ಯ ಸಭಾ ಸದಸ್ಯರು, ವಿರೋಧ ಪಕ್ಷಗಳ ನಾಯಕರು ಸಬೆಯಲ್ಲಿ ಪಾಲ್ಗೊಂಡರು. ಪಕ್ಷೇತರರಾಗಿದ್ದರೂ ಬಿಜೆಪಿಗೆ ಬೆಂಬಲ ಸೂಚಿಸಿರುವ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಮತ್ತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಇಂದು ಮತ್ತೊಮ್ಮೆ ಒಂದೇ ಸ್ಥಳದಲ್ಲಿ ಕಂಡರು. ನಿಮಗೆ ಗೊತ್ತಿದೆ, ಸುಮಲತಾ ಬಿಜೆಪಿ ಕಡೆ ವಾಲುವ ಮೊದಲು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಕಳಪೆ ಕಾಮಗಾರಿ ಸಂಬಂಧಿಸಿದಂತೆ ಅವರ ಮತ್ತು ಪ್ರತಾಪ್ ಸಿಂಹ ನಡುವೆ ವಾಗ್ದಾಳಿ ನಡೆಯುತಿತ್ತು. ಹಾಗಾಗಿ, ಅವರು ಪರಸ್ಪರ ಎದುರಾದಾಗ ಅವರಿಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ನೋಡುವ ಕಾತುರ ಎಲ್ಲರಿಗೂ ಇರುತ್ತದೆ. ಆದರೆ, ಇಂಥ ಸಂದರ್ಭಗಳಲ್ಲಿ ಅವರು ಒಬ್ಬರನ್ನೊಬ್ಬರು ಅವಾಯ್ಡ್ ಮಾಡುವ ಪ್ರಯತ್ನ ಮಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ