ನನಗೆ ಸದ್ಯಕ್ಕೆ ಬಿಜೆಪಿ ಸೇರುವ ಅವಶ್ಯಕತೆ ಇಲ್ಲ, ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲೂ ಹೇಳಿಲ್ಲ: ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ

ನನಗೆ ಸದ್ಯಕ್ಕೆ ಬಿಜೆಪಿ ಸೇರುವ ಅವಶ್ಯಕತೆ ಇಲ್ಲ, ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲೂ ಹೇಳಿಲ್ಲ: ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ
ನನಗೆ ಸದ್ಯಕ್ಕೆ ಬಿಜೆಪಿ ಸೇರುವ ಅವಶ್ಯಕತೆ ಇಲ್ಲ, ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲೂ ಹೇಳಿಲ್ಲ: ಸಂಸದೆ ಸುಮಲತಾ ಅಂಬರೀಶ್

sumalatha ambareesh: ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದರೆ, ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ. ಸಚಿವ ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ಆದರೆ ನನಗೆ ಈಗ ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ -ಸಂಸದೆ ಸುಮಲತಾ

TV9kannada Web Team

| Edited By: sadhu srinath

Apr 28, 2022 | 3:27 PM


ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಾತನಾಡಿದ್ದು ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ‌ ಕಾರಣದಿಂದ ಮುಖಂಡರಿಗೆ ಸಂಸದರ ನಿಧಿ ಬಗ್ಗೆ ತಿಳಿಸುತ್ತಿದ್ದೇನೆ. ಮುಖಂಡರು ಹಿಂದೆ ಫಂಡ್ ಬಗ್ಗೆ ಕೇಳಿದ್ದರು. ಈ ಬಗ್ಗೆ ಪ್ರಸ್ತಾಪ ಮಾಡಲು ಅವರನ್ನು ಸಭೆ ಕರೆದಿದ್ದೇನೆ. ಹಾಗಂತ ಈ ಸಭೆ ಬಿಜೆಪಿ ಸೇರುವ ಬಗ್ಗೆ ಅಲ್ಲ. ನಾನು ಬಿಜೆಪಿ (BJP) ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದರೆ, ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ. ಸಚಿವ ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ಆದರೆ ನನಗೆ ಈಗ ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ, ಈಗ ಈ ಪ್ರಸ್ತಾಪವೇ ಬೇಡ. ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಇದನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಜನರು ಏನು ಅಭಿಪ್ರಾಯ ಹೇಳಿದ್ದಾರೆ ಅದನ್ನು ಹೇಳಲ್ಲ. ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನಾನು ಹೇಳಲ್ಲ. ಎಲ್ಲರೂ ಸ್ವತಂತ್ರರು, ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ. ಅಭಿಷೇಕ್ ಚುನಾವಣೆ ಸ್ಪರ್ಧೆ ಆತನಿಗೆ ಬಿಟ್ಟಿದ್ದು. ಸಿನಿಮಾಗೆ ಬಾ ಎಂದು ನಾವು ಹೇಳಿಲ್ಲ, ರಾಜಕೀಯ ಬಗ್ಗೆನೂ ನಾವು ಹೇಳಲ್ಲ. ಇದು ಆತನ ವೈಯಕ್ತಿಕ ವಿಚಾರ ಎಂದು ಸಂಸದೆ ಸುಮಲತಾ (mandya mp sumalatha ambareesh) ಹೇಳಿದ್ದಾರೆ.

Sumalatha: ಮಾಧ್ಯಮದವರ ಪ್ರಶ್ನೆಗೆ ಹೇಗಿತ್ತು ಸಂಸದೆ ರಿಯಾಕ್ಷನ್

Also Read:
ಗೌರವಯುತವಾಗಿ ಶರಣಾಗಿ, ಇಲ್ಲಾಂದ್ರೆ ಆಸ್ತಿ ಮುಟ್ಟುಗೋಲು ಹಾಕ್ತೇವೆ -ಹಾಗರಗಿಗೆ ಗೃಹ ಸಚಿವ ಎಚ್ಚರಿಕೆ ಮಿಶ್ರಿತ ಕಿವಿಮಾತು

Also Read:
ಪಿಎಸ್ಐ ಆಕ್ರಮದ ನಡುವೆ ಮತ್ತೊಂದು ಪ್ರಕರಣ ಬಯಲು; ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆದ ವಿಡಿಯೋ ಬಿಡುಗಡೆ ಮಾಡಿದ AAP

Follow us on

Related Stories

Most Read Stories

Click on your DTH Provider to Add TV9 Kannada