ಜಿಮ್ನಲ್ಲಿ ಗೆಳೆಯನ ಹುಟ್ಟುಹಬ್ಬ ಆಚರಿಸಿದ ಎಂಎಸ್ ಧೋನಿ: ವಿಡಿಯೋ ವೈರಲ್
MS Dhoni Friends Birthday: ಬರ್ತ್ ಡೇ ಸೆಲೆಬ್ರೇಷನ್ ಅಥವಾ ಪಾರ್ಟಿಯಲ್ಲಿ ಹೆಚ್ಚು ಭಾಗವಹಿಸುವ ಮಹೇಂದ್ರ ಸಿಂಗ್ ಧೋನಿ ಇದೀಗ ತಮ್ಮ ಜಿಮ್ ಮೇಟ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಜಿಮ್ನಲ್ಲಿ ಧೋನಿ ಅವರು ಗೆಳೆಯನ ಬರ್ತ್ ಡೇ ಆಚರಿಸುತ್ತಿರುವ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಅನೇಕ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಾತ್ರ ಕಾಣಿಸಿಕೊಳ್ಳುವ ಕೂಲ್ ಕ್ಯಾಪ್ಟನ್ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಬರ್ತ್ ಡೇ ಸೆಲೆಬ್ರೇಷನ್ ಅಥವಾ ಪಾರ್ಟಿಯಲ್ಲಿ ಹೆಚ್ಚು ಭಾಗವಹಿಸುವ ಧೋನಿ ಇದೀಗ ತಮ್ಮ ಜಿಮ್ ಮೇಟ್ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಜಿಮ್ನಲ್ಲಿ ಧೋನಿ ಅವರು ಗೆಳೆಯನ ಬರ್ತ್ ಡೇ ಆಚರಿಸುತ್ತಿರುವ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೆ ಧೋನಿ ಕ್ಲೀನ್ ಶೇವ್ ಮಾಡಿ ಹೊಸ ಲುಕ್ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹತ್ತಿರವಾಗುತ್ತಿರುವುದರಿಂದ ಧೋನಿ ಜಿಮ್ನಲ್ಲಿ ವರ್ಕೌಟ್ ಮಾಡಲು ಕೂಡ ಶುರುಮಾಡಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ