Video: ಬೈಕ್ ಸವಾರನ ದುರ್ವತನೆ: ಚಲಿಸುತಿದ್ದ ಕಾರು ಮಿರರ್ ಹೊಡೆದು ಪರಾರಿ: ಎಫ್ಐಆರ್ ದಾಖಲು
ಚಲಿಸುತಿದ್ದ ಕಾರಿನ ಮಿರರ್ಗೆ ಹೊಡೆದು ಬೈಕ್ ಸವಾರನೋರ್ವ ದುರ್ವತನೆ ತೋರಿರುವಂತಹ ಘಟನೆ ಕನಕಪುರ ಮುಖ್ಯರಸ್ತೆಯಲ್ಲಿ ನ. 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೆ ಸಂಚಾರಿ ಪೊಲೀಸರಿಂದ ಬೈಕ್ ಸವಾರ ರೋಹಿತ್ (21) ನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ನವೆಂಬರ್ 8: ಚಲಿಸುತಿದ್ದ ಕಾರಿನ ಮಿರರ್ಗೆ ಹೊಡೆದು ಬೈಕ್ ಸವಾರನೋರ್ವ (biker) ದುರ್ವತನೆ ತೋರಿರುವಂತಹ ಘಟನೆ ಕನಕಪುರ ಮುಖ್ಯರಸ್ತೆಯಲ್ಲಿ ನ. 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೆ ಸಂಚಾರಿ ಪೊಲೀಸರಿಂದ ಬೈಕ್ ಸವಾರ ರೋಹಿತ್ (21) ನನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 19 ಸಾವಿರ ಮೌಲ್ಯದ 39 ಪ್ರಕರಣಗಳನ್ನು ಬೈಕ್ ಬಾಕಿ ಹೊಂದಿದೆ. ಕಾರ್ ಮಿರರ್ ಹೊಡೆದ ಕೃತ್ಯ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತನ್ನ ಪಾಡಿಗೆ ತಾನು ಕಾರ್ನಲ್ಲಿ ಚಾಲಕ ತೆರಳುತಿದ್ದ. ಈ ವೇಳೆ ಪಕ್ಕದಲ್ಲೇ ಬೈಕ್ನಲ್ಲಿ ತ್ರಿಬಲ್ ರೇಡ್ನಲ್ಲಿ ಬಂದ ಯುವಕರು ನೋಡ ನೋಡುತಿದ್ದಂತೆ ಕಾರ್ನ ಸೈಡ್ ಮಿರರ್ನ್ನು ಕೈನಿಂದ ಹೊಡೆದು ಚೂರು ಮಾಡಿ ಪರಾರಿ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.