ಮಂತ್ರಾಲಯ ಮಠದಲ್ಲಿಂದು ಮಧ್ಯಾರಾಧನೆ: ರಾಯರಿಗೆ 1.5 ಕೋಟಿ ರೂ ಮೌಲ್ಯದ ಚಿನ್ನದ ಸರ ಕಾಣಿಕೆ ನೀಡಿದ ಎಂ. ಎಸ್. ರಾಮಯ್ಯ ಮಗ ಪಟ್ಟಾಭಿ ರಾಮ್

| Updated By: ಆಯೇಷಾ ಬಾನು

Updated on: Aug 13, 2022 | 6:38 PM

ಎಮ್. ಎಸ್. ರಾಮಯ್ಯರ ಮಗ ಪಟ್ಟಾಭಿ ರಾಮ್ ರಾಯರಿಗೆ 1.5 ಕೋಟಿ ರೂ ಬೆಲೆ ಬಾಳುವ ಚಿನ್ನದ ಸರ ಕಾಣಿಕೆಯಾಗಿ ನೀಡಿದ್ದಾರೆ.

ದೇಶದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಂತ್ರಾಲಯದಲ್ಲಿ(Mantralayam) ಶ್ರೀ ರಾಘವೇಂದ್ರ ಸ್ವಾಮಿಗಳ(Sri Raghavendra Swamiji) 351ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಆಗಸ್ಟ್ 10ರಿಂದ ಆರಂಭವಾಗಿ ಆಗಸ್ಟ್ 16 ವರೆಗೆ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ಎಮ್. ಎಸ್. ರಾಮಯ್ಯರ ಮಗ ಪಟ್ಟಾಭಿ ರಾಮ್ ರಾಯರಿಗೆ 1.5 ಕೋಟಿ ರೂ ಬೆಲೆ ಬಾಳುವ ಚಿನ್ನದ ಸರ ಕಾಣಿಕೆಯಾಗಿ ನೀಡಿದ್ದಾರೆ.