ಕಾಲು ಜಾರಿ ಬಿದ್ದ ಹಿರಿಯ ನಟ ಎಂ.ಎಸ್. ಉಮೇಶ್: ಆಸ್ಪತ್ರೆಗೆ ದಾಖಲು

Updated on: Oct 10, 2025 | 5:49 PM

ಖ್ಯಾತ ನಟ ಎಂ.ಎಸ್. ಉಮೇಶ್ ಅವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಜೆ.ಪಿ ನಗರದ ನಿವಾಸದಲ್ಲಿ ಅವರು ಜಾರಿ ಬಿದ್ದಿದ್ದಾರೆ. ಉಮೇಶ್ ಅವರ ಸೊಂಟ ಮತ್ತು ಭುಜಕ್ಕೆ ಪೆಟ್ಟಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ (MS Umesh) ಅವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಜೆ.ಪಿ ನಗರದ ನಿವಾಸದಲ್ಲಿ ಅವರು ಜಾರಿ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಉಮೇಶ್ ಅವರ ಸೊಂಟ ಹಾಗೂ ಭುಜದ ಭಾಗಕ್ಕೆ ಪೆಟ್ಟಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಪೆಟ್ಟಾಗಿರುವುದರಿಂದ ಅವರಿಗೆ ಸರ್ಜರಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 1960ರ ದಶಕದಿಂದಲೂ ಉಮೇಶ್ ಅವರು ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ. ಈಗಲೂ ಕೂಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.