ಸೂರ್ಯನ ಅಧ್ಯಯನ ನಡೆಸಲು ಅಂತರಿಕ್ಷಕ್ಕೆ ಯಶಸ್ವೀಯಾಗಿ ಚಿಮ್ಮಿದ ಆದಿತ್ಯ ಎಲ್1 ಮಿಶನ್ ಹೊತ್ತ ಪಿಎಸ್ ಎಲ್ ವಿ ಸಿ-57

|

Updated on: Sep 02, 2023 | 1:00 PM

ಆದಿತ್ಯ ಎಲ್1 ಮಿಷನ್ ಸೂರ್ಯನಲ್ಲಿ ನಡೆಯವ ಜ್ವಾಲಾಮುಖಿಗಳ ಸ್ಫೋಟ, ಆಯಸ್ಕಾಂತೀಯ ಬಿರುಗಾಳಿ, ಸೂರ್ಯನಿಂದ ಹೊರಹೊಮ್ಮುವ ಬಗೆಬಗೆಯ ಕಿರಣಗಳಿಂದ ಉಪಗ್ರಹಗಳ ಮೇಲೆ ಆಗುವ ಪ್ರಭಾವ ಮೊದಲಾದ ಹಲವು ಸಂಗತಿಗಳ ಅಧ್ಯಯನ ನಡೆಸಲಿದೆ. ಇಂದಿನಿಂದ 125 ಗಳ ಬಳಿಕ ಆದಿತ್ಯ ಎಲ್1 ಮಿಷನ್ ಅಂತರಿಕ್ಷದಲ್ಲಿ ತನ್ನ ನಿಗದಿತ ಸ್ಥಳ ತಲುಪಲಿದೆ.

ಶ್ರೀಹರಿಕೋಟಾ: ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೆತ್ರದಲ್ಲಿ ಇವತ್ತು ಮತ್ತೊಂದು ಮೈಲಿಗಲ್ಲು. ಚಂದ್ರನನ್ನು ಗೆದ್ದಾದ ಮೇಲೆ ಸೂರ್ಯನ ಅಧ್ಯಯನ. ಗುರಿಯನ್ನು ಹೊತ್ತ ಆದಿತ್ಯ ಎಲ್1 ಮಿಶನ್ ಅನ್ನು (Aditya L1 Mission) ಪಿಎಸ್ ಎಲ್ ವಿ ಸಿ-57 ನೊಂದಿಗೆ ಆಂಧ್ರಪ್ರದೇಶದ ತಿರುಪತಿ ಜಿಲ್ಲೆ ಶ್ರೀಹರಿಕೋಟಾದಲ್ಲಿರುವ (Sriharikota) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವೀಯಾಗಿ ಹಾರಿ ಬಿಡಲಾಯಿತು. ಪ್ರತಿಯೊಬ್ಬ ಭಾರತೀಯನಿಗೆ ಇದೊಂದು ಹೆಮ್ಮೆ ಮತ್ತು ಅಭೂತಪೂರ್ವ ಕ್ಷಣ. ಆಫ್ ಕೋರ್ಸ್, ಭಾರತ ಹಲವಾರು ಉಪಗ್ರಹಗಳನ್ನು ಹಾರಿಬಿಟ್ಟಿದೆ ಆ ವಿಚಾರ ಬೇರೆ. ಆದರೆ ಆದಿತ್ಯ ಎಲ್1 ಮಿಷನ್ ದೇಶದ ಪ್ರಥಮ ಸೌರ ಅಂತರಿಕ್ಷ ಯಾನವಾಗಿದೆ. ಆದಿತ್ಯ ಎಲ್1 ಮಿಷನ್ ಸೂರ್ಯನಲ್ಲಿ ನಡೆಯವ ಜ್ವಾಲಾಮುಖಿಗಳ ಸ್ಫೋಟ, ಆಯಸ್ಕಾಂತೀಯ ಬಿರುಗಾಳಿ, ಸೂರ್ಯನಿಂದ ಹೊರಹೊಮ್ಮುವ ಬಗೆಬಗೆಯ ಕಿರಣಗಳಿಂದ ಉಪಗ್ರಹಗಳ ಮೇಲೆ ಆಗುವ ಪ್ರಭಾವ ಮೊದಲಾದ ಹಲವು ಸಂಗತಿಗಳ ಅಧ್ಯಯನ ನಡೆಸಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಎಸ್ ಸೋಮನಾಥ ಅವರು ತಿಳಿಸಿದಂತೆ ಇಂದಿನಿಂದ 125 ಗಳ ಬಳಿಕ ಆದಿತ್ಯ ಎಲ್1 ಮಿಷನ್ ಅಂತರಿಕ್ಷದಲ್ಲಿ ತನ್ನ ನಿಗದಿತ ಸ್ಥಳ ತಲುಪಲಿದೆ. ಆದಿತ್ಯ ಎಲ್1 ಮಿಷನ್ ನಭಕ್ಕೆ ಹಾರಿದ ಅ ಅವಿಸ್ಮರಣೀಯ ಕ್ಷಣಗಳನ್ನು ಈ ವಿಡಿಯೋ ಮೂಲಕ ಕಣ್ತುಂಬಿಕೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ