ಪಟ್ಟು ಬಿಡದ ಮುಧೋಳ ಕಬ್ಬು ಬೆಳೆಗಾರರು: ಸಂಧಾನ ವಿಫಲ, ನಾಳೆ ಪ್ರತಿಭಟನಾ ರ‍್ಯಾಲಿ

Edited By:

Updated on: Nov 09, 2025 | 10:29 PM

ಕಬ್ಬಿನ ಬೆಲೆ ನಿಗದಿ ಕುರಿತು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಸಂಧಾನ ಸಭೆ ವಿಫಲವಾಗಿದೆ. ಮುಧೋಳದಲ್ಲಿ ನಾಳೆ ಬೃಹತ್ ಪ್ರತಿಭಟನೆಗೆ ರೈತರು ಸಿದ್ಧರಾಗಿದ್ದಾರೆ. ಸರ್ಕಾರ ಮತ್ತು ಕಾರ್ಖಾನೆಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ವಿಡಿಯೋ ನೋಡಿ.

ಬಾಗಲಕೋಟೆ, ನವೆಂಬರ್​ 09: ರಾಜ್ಯದಲ್ಲಿ ಕಬ್ಬಿನ ದರ ನಿಗದಿ ವಿಚಾರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.  ನಿನ್ನೆಯಷ್ಟೇ ಸರ್ಕಾರ ಪ್ರತಿ ಟನ್​ ಕಬ್ಬಿಗೆ 3 ಸಾವಿರದ 300 ರೂ. ಫಿಕ್ಸ್ ಮಾಡಿರೋದಕ್ಕೆ ಬೆಳಗಾವಿ ರೈತರು ಒಪ್ಪಿಕೊಂಡಿದ್ದರು. ಆದರೆ ಬಾಗಲಕೋಟೆ ಜಿಲ್ಲೆಯ ಮುಧೋಳ ರೈತರು ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ನಮಗೆ 3 ಸಾವಿರದ 500 ರೂ. ಕೊಡಬೇಕು ಎನ್ನುತ್ತಿದ್ದಾರೆ. ನಾಳೆ ಮುಧೋಳ‌ ನಗರದಲ್ಲಿ ಬೃಹತ್​ ಪ್ರತಿಭಟನಾ ರ‍್ಯಾಲಿ ಮಾಡುತ್ತೇವೆ ಎಂದು ಮುಧೋಳದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.