MI vs CSK: ತಾಯಿಯ ಅಗಲಿಕೆಯ ನೋವಿನಲ್ಲೂ ಕಣಕ್ಕಿಳಿದು ವಿಕೆಟ್ ಉರುಳಿಸಿದ ಮುಖೇಶ್ ಚೌದರಿ

Updated on: Apr 23, 2026 | 10:53 PM

Mukesh Choudhary's Emotional IPL 2026 Wicket: ತಾಯಿಯ ಅಗಲಿಕೆಯ ನೋವಿನಲ್ಲೂ ಸಿಎಸ್‌ಕೆ ತಾರೆ ಮುಖೇಶ್ ಚೌಧರಿ ಐಪಿಎಲ್ 2026ರ ಪಂದ್ಯದಲ್ಲಿ ಕಣಕ್ಕಿಳಿದು ಗಮನ ಸೆಳೆದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದು, ಅದನ್ನು ದಿವಂಗತ ತಾಯಿಗೆ ಸಮರ್ಪಿಸಿದರು. ಅವರ ಈ ಭಾವನಾತ್ಮಕ ಪ್ರದರ್ಶನ ಅಭಿಮಾನಿಗಳ ಹೃದಯ ಗೆದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್ 2026 ರ 33 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಯುವ ವೇಗದ ಮುಖೇಶ್ ಚೌಧರಿ ಅವರ ತಾಯಿ ಸಾವನ್ನಪ್ಪಿದರು. ಇದರಿಂದಾಗಿ ಈ ಪಂದ್ಯದಲ್ಲಿ ಮುಖೇಶ್ ಚೌಧರಿ ಆಡುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ತಾಯಿಯ ಅಗಲಿಕೆಯ ನೋವಿನಲ್ಲೂ ಸಿಎಸ್​​ಕೆ ಪರ ಕಣಕ್ಕಿದ ಮುಖೇಶ್ ತಾವು ಬೌಲ್ ಮಾಡಿದ ಮೊದಲ ಓವರ್​ನಲ್ಲೇ ವಿಕೆಟ್ ಉರುಳಿಸಿ ಅಗಲಿದೆ ಅಮ್ಮನಿಗೆ ಅರ್ಪಿಸಿದರು.

ಮುಖೇಶ್ ಅವರ ತಾಯಿ ಮಂಗಳವಾರ, ಏಪ್ರಿಲ್ 21 ರಂದು ನಿಧನರಾದರು. ಹೀಗಾಗಿ ಮನೆಗೆ ಮರಳಿದ್ದ ಮುಖೇಶ್ ತಮ್ಮ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿ, ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ಕೆಲವೇ ಗಂಟೆಗಳಲ್ಲಿ ಚೆನ್ನೈ ತಂಡವನ್ನು ಸೇರಿಕೊಂಡಿದ್ದರು. ಇದಾದ ಬಳಿಕ ತಂಡದ ಆಡುವ ಹನ್ನೊಂದರ ಬಳಗದಲ್ಲೂ ಕಾಣಿಸಿಕೊಂಡ ಮುಖೇಶ್, ತಾವು ಬೌಲ್ ಮಾಡಿದ ಓವರ್‌ನ ಮೊದಲ 4 ಡಾಟ್ ಬಾಲ್‌ಗಳನ್ನು ಎಸೆದರು. ನಂತರ ಮುಖೇಶ್ ಐದನೇ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿ ಸಿಎಸ್​ಕೆಗೆ ಮೊದಲ ವಿಕೆಟ್ ತಂದುಕೊಟ್ಟರು. ಮುಖೇಶ್ ವಿಕೆಟ್ ಪಡೆದ ತಕ್ಷಣ ಆಕಾಶದತ್ತ ನೋಡಿ, ಅಗಲಿದ ಅಮ್ಮನಿಗೆ ಈ ವಿಕೆಟ್ ಸಮರ್ಪಿಸಿದರು. ಇದೀಗ ಮುಖೇಶ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Published on: Apr 23, 2026 10:51 PM
Follow Us