ಮುಲ್ಕಿ ಬಳಿ ಸರಣಿ ಅಪಘಾತ ಪ್ರಕರಣ; ಲಾರಿ ಚಾಲಕನ ಬಂಧನ, ಇಲ್ಲಿದೆ ಅಪಘಾತದ ಭಯಾನಕ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 07, 2023 | 4:30 PM

ಮುಲ್ಕಿ ಬಳಿ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿ ಚಾಲಕ ಮಂಜುನಾಥ್(25) ಎಂಬಾತನನ್ನು ಬಂಧಿಸಿ, ಟ್ರಕ್(Truck)​ನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಅಪಘಾತ(Accident)ದಲ್ಲಿ ಲೇಡಿ ಹೆಡ್ ಕಾನ್ಸ್ಟೇಬಲ್ ಗೀತಾ, ಆಟೋ ಸವಾರ ಧರ್ಮೇಂದ್ರ, ಬೈಕ್ ಸಹ ಸವಾರ ಸವಿತಾ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾದರೆ, ಬೈಕ್ ಸವಾರ‌ ಸಂಗಪ್ಪ ಎಂಬುವವರಿಗೆ ಗಂಭೀರ ಗಾಯವಾಗಿದೆ.

ದಕ್ಷಿಣ ಕನ್ನಡ, ಡಿ.07: ಮುಲ್ಕಿ ಬಳಿ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿ ಚಾಲಕ ಮಂಜುನಾಥ್(25) ಎಂಬಾತನನ್ನು ಬಂಧಿಸಿ, ಟ್ರಕ್(Truck)​ನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಅಪಘಾತ(Accident)ದಲ್ಲಿ ಲೇಡಿ ಹೆಡ್ ಕಾನ್ಸ್ಟೇಬಲ್ ಗೀತಾ, ಆಟೋ ಸವಾರ ಧರ್ಮೇಂದ್ರ, ಬೈಕ್ ಸಹ ಸವಾರ ಸವಿತಾ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾದರೆ, ಬೈಕ್ ಸವಾರ‌ ಸಂಗಪ್ಪ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಪಾರ್ಟ್​ಮೆಂಟ್​ಲ್ಲಿ ವಾಚ್ಮನ್‌ ಆಗಿರುವ ಸಂಗಪ್ಪ, ಮಗಳನ್ನು ಬಸ್ ಸ್ಟ್ಯಾಂಡ್​ಗೆ ಬಿಡಲು ಬಂದಿದ್ದ. ಮಗಳು‌ ಸವಿತಾ, ಸಣ್ಣ ಪುಟ್ಟ ಗಾಯಗಳಿಂದ ಅಪಾಯ‌ದಿಂದ ಪಾರಾಗಿದ್ದಾರೆ. ಇನ್ನು ರಸ್ತೆ ಬದಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರತ್ತ ಲಾರಿ ನುಗ್ಗಿ ಬಂದಿದೆ. ಕೂದಲೆಳೆ ಅಂತರದಿಂದ ಕೂಲಿ ಕಾರ್ಮಿಕರು ಪಾರಾಗಿದ್ದಾರೆ. ಇನ್ನು ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ