ಚಾರ್ಜ್ ಶೀಟ್ ಪ್ರಕಾರ ಮುರುಘಾ ಮಠದ ಸ್ವಾಮಿ ತನ್ನಲ್ಲಿಗೆ ಕಳಿಸಬೇಕಾದ ಬಾಲಕಿಯರ ಲಿಸ್ಟ್ ವಾರ್ಡನ್ ರಶ್ಮಿಗೆ ಕೊಟ್ಟಿರುತ್ತಿದ್ದ!
ಅವನು ಕೊಟ್ಟ ಲಿಸ್ಟ್ ಮತ್ತು ಇತರ ಆದೇಶಗಳನ್ನು ರಶ್ಮಿ ಶಿರಸಾವಹಿಸಿ ಪಾಲಿಸಿದ್ದಾಳೆ. ಪೊಲೀಸರ ಪ್ರಕಾರ ಕಾಮಿ ಸ್ವಾಮಿ 10ಕ್ಕೂ ಹೆಚ್ಚು ಬಾಲಕಿಯರ ಬದುಕನ್ನು ಹಾಳು ಮಾಡಿದ್ದಾನೆ!
ಬೆಂಗಳೂರು: ಸ್ವಾಮೀಜಿಯ ಸೋಗಿನಲ್ಲಿ ಚಿತ್ರದುರ್ಗ ಮುರುಘಾ ಮಠದ (Murugha Mutt) ಪೀಠದಲ್ಲಿ ವಕ್ಕರಿಸಿದ್ದ ಶಿವಾಚಾರ್ಯನ (Shivacharya) ಕರಾಳ ರೂಪ ಮತ್ತು ಹೇಸಿಗೆ ಹುಟ್ಟಿಸುವ ಸಂಗತಿಗಳು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿವೆ. ನಿರ್ದಿಷ್ಟ ದಿನ ಯಾವ ಬಾಲಕಿಯನ್ನು ತನ್ನಲ್ಲಿಗೆ ಕಳಿಸಬೇಕೆಂದು ಅವನು ವಾರ್ಡನ್ ರಶ್ಮಿಗೆ (warden Rashmi) ಒಂದು ಲಿಸ್ಟ್ ಕೊಡುತ್ತಿದ್ದನಂತೆ. ತಾನೊಂದು ಹೆಣ್ಣಾಗಿದ್ದುಕೊಂಡು ಸ್ವಾಮಿಯ ಪಾಪಕೃತ್ಯಗಳಲ್ಲಿ ಸಮಭಾಗಿಯಾಗಿರುವ ರಶ್ಮಿ, ಅವನು ಕೊಟ್ಟ ಲಿಸ್ಟ್ ಮತ್ತು ಇತರ ಆದೇಶಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದಾಳೆ. ಪೊಲೀಸರ ಪ್ರಕಾರ ಕಾಮಿ ಸ್ವಾಮಿ 10ಕ್ಕೂ ಹೆಚ್ಚು ಬಾಲಕಿಯರ ಬದುಕನ್ನು ಹಾಳು ಮಾಡಿದ್ದಾನೆ!
Published on: Nov 10, 2022 12:27 PM