ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಎಐಎಮ್ಐಎಮ್ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಣೆ!
ಕಾರ್ಯಕರ್ತರು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಟಿಪ್ಪು ಸುಲ್ತಾನ್ ಕೀ ಜೈ, ಶೇರ್-ಎ-ಕರ್ನಾಟಕ ಅಂತ ಘೋಷಣೆಗಳನ್ನು ಕೂಗಿದರು.
ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಆಲ್ ಇಂಡಿಯ ಮಜ್ಲಿಸ್-ಎ-ಇತ್ತೆಹಾದುಲ್ ಮುಸಲ್ಮೀನ್ (ಎ ಐ ಎಮ್ ಐ ಎಮ್) (AIMIM) ಕಾರ್ಯಕರ್ತರು ಗುರುವಾರ ಟಿಪ್ಪು ಜಯಂತಿಯನ್ನು (Tipu Jayanti) ಆಚರಿಸಿದರು. ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಆಚರಣೆ ನಡೆಸುವ ಅವಕಾಶವನ್ನು ಧಾರವಾಡ ಜಿಲ್ಲಾಡಳಿತ (district administration) ಕಲ್ಪಿಸಿತ್ತು. ಕಾರ್ಯಕರ್ತರು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಟಿಪ್ಪು ಸುಲ್ತಾನ್ ಕೀ ಜೈ, ಶೇರ್-ಎ-ಕರ್ನಾಟಕ ಅಂತ ಘೋಷಣೆಗಳನ್ನು ಕೂಗಿದರು. ಹನ್ನೆರಡರ ನಂತರ ಕಾರ್ಯಕರ್ತರು ಟಿಪ್ಪು ಭಾವಚಿತ್ರವನ್ನು ತೆಗೆದುಕೊಂಡು ಮೈದಾನದಿಂದ ಹೊರಬಂದರು.
Latest Videos