Arjun Janya: ಅರ್ಜುನ್ ಜನ್ಯ ಬತ್ತಳಿಕೆಯಲ್ಲಿ ಈಗ ಒಟ್ಟು ಎಷ್ಟು ಚಿತ್ರಗಳಿವೆ ಗೊತ್ತಾ? ಇಲ್ಲಿದೆ ಮಾಹಿತಿ
ಸ್ಯಾಂಡಲ್ವುಡ್ನ ಬಹುಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ‘ಕೋಟಿಗೊಬ್ಬ 3’ ಚಿತ್ರದ ಸಕ್ಸಸ್ ಮೀಟ್ ಸಂದರ್ಭದಲ್ಲಿ ಅವರು ಟಿವಿ9ನೊಂದಿಗೆ ಮಾತನಾಡಿದ್ದಾರೆ.
ಪ್ರಸ್ತುತ ಸ್ಯಾಂಡಲ್ವುಡ್ನ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಅರ್ಜುನ್ ಜನ್ಯಾ ಒಬ್ಬರು. ‘ಕೋಟಿಗೊಬ್ಬ 3’ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ಹಮ್ಮಿಕೊಂಡಿದ್ದ ಸಕ್ಸಸ್ ಮೀಟ್ನಲ್ಲಿ ಭಾಗವಹಿಸಿದ್ದ ಅರ್ಜುನ್ ಜನ್ಯ ಟಿವಿ9ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ಅನೇಕ ಅಚ್ಚರಿಯ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ತಮ್ಮೆಲ್ಲಾ ಯಶಸ್ಸಿನ ಕ್ರೆಡಿಟ್ಸ್ಗಳನ್ನು ಸುದೀಪ್ ಅವರಿಗೆ ನೀಡುತ್ತೇನೆ ಎಂದಿರುವ ಅವರು, ‘ಕೆಂಪೇಗೌಡ’ದಿಂದ ‘ಕೋಟಿಗೊಬ್ಬ 3’ಯವರೆಗೆ ಬಂದು ನಿಲ್ಲಲು ಸುದೀಪ್ ಪ್ರಮುಖ ಕಾರಣ ಎಂದಿದ್ದಾರೆ.
ಇದೇ ವೇಳೆ ಅರ್ಜುನ್ ಜನ್ಯಾರ ಮುಂದೆ ಎಷ್ಟು ಸಿನಿಮಾಗಳಿವೆ ಎಂಬ ಪ್ರಶ್ನೆ ಎದುರಾದಾಗ ಬಹಳ ಅಚ್ಚರಿಯ ಉತ್ತರವನ್ನು ಅವರು ನೀಡಿದ್ದಾರೆ. ಅವರ ಕೈಯಲ್ಲೀಗ 18 ಸಿನಿಮಾಗಳಿವೆ. ‘ಭಜರಂಗಿ 2’. ‘ಏಕ್ ಲವ್ ಯಾ’, ‘ಗಾಳಿಪಟ 2’, ‘ರೈಡರ್’, ‘ಅವತಾರ ಪುರುಷ’ ಸೇರಿದಂತೆ ಹಲವು ಚಿತ್ರಗಳ ಕೆಲಸಗಳು ನಡೀತಾ ಇವೆ ಎಂದಿದ್ದಾರೆ. ಒಂದರ ನಂತರ ಒಂದು ತಯಾರಾಗುತ್ತಿದೆ ಎಂದು ಅರ್ಜುನ್ ಜನ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ:
ಉಪೇಂದ್ರ ಬಗ್ಗೆ ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಸುದೀಪ್ ಮಾತು; ಉಪ್ಪಿ ಅಂದ್ರೆ ಸ್ಫೂರ್ತಿಯ ಕಿಚ್ಚು
ನಿರೂಪಣೆಯಿಂದ ಅರುಣ್ ಸಾಗರ್ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್