Temple Tour: ಅಮೃತ ಶಿಲೆಯಲ್ಲಿ ದಿವ್ಯ ಸ್ವರೂಪನಾಗಿ ಕಂಗೊಳಿಸುತ್ತಿದ್ದಾನೆ ಸಾಯಿಬಾಬಾ
ಪುಟ್ಟದಾಗಿ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಸ್ಥಳೀಯರು ತಮ್ಮ ಕೈಲಾದ ಹಣ ಹಾಕಿ ಮಂದಿರ ನಿರ್ಮಾಣಕ್ಕೆ ಅಣಿಯಾಗಿದ್ದರು.
ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರ ಯಾರಿಗೆ ಗೊತ್ತಿಲ್ಲಾ ಹೇಳಿ. ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ದೇಶದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಭಕ್ತರಿದ್ದಾರೆ. ಶಿರಡಿ ಸಾಯಿ ಬಾಬಾ ಸನ್ನಿಧಿಯಲ್ಲಿ ನಡೆಯುವ ಪವಾಡಗಳು ಆಗಾಗ ಸುದ್ದಿಯಾಗುತ್ತಾ ಇರುತ್ತದೆ. ದೇವತಾ ಮನುಷ್ಯರೆಂದು ಸಾಯಿಬಾಬಾ ಅವರನ್ನು ಭಕ್ತಿಯಿಂದ ಪೂಜಿಸುತ್ತೇವೆ. ಕಷ್ಟಗಳನ್ನು ನಿವಾರಣೆ ಮಾಡಿ ಒಳಿತು ಮಾಡು ಬಾಬಾ ಎಂದು ಬೇಡಿಕೆ ಇಡುತ್ತೇವೆ. ಭಕ್ತರ ಕಷ್ಟ ಕರಗಿಸುವ ಸಾಯಿಬಾಬಾ ಶಿರಡಿ ವಾಸಿಯೆಂದು ಭಕ್ತಗಣ ಕರೆಯುತ್ತದೆ. ಅಂತಾ ಶಿರಡಿ ಮಂದಿರವನ್ನೇ ಹೋಲುವ ಆಲಯವೊಂದು ವಿಜಯಪುರದಲ್ಲಿದೆ. 1995ರಲ್ಲಿ ಈ ಮಂದಿರ ನಿರ್ಮಾಣವಾಗಿದೆ. ಪುಟ್ಟದಾಗಿ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಸ್ಥಳೀಯರು ತಮ್ಮ ಕೈಲಾದ ಹಣ ಹಾಕಿ ಮಂದಿರ ನಿರ್ಮಾಣಕ್ಕೆ ಅಣಿಯಾಗಿದ್ದರು. ಮಂದಿರ ನಿರ್ಮಾಣಕ್ಕಾಗಿ ನೆಲ ಅಗೆಯುತ್ತಿದ್ದಾಗ ಒಂದು ಕಪ್ಪನೆಯ ಶಿಲೆ ಸಿಕ್ಕಿತಂತೆ.

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
