ಕೊಲ್ಲೂರು ಮೂಕಾಂಬಿಕೆಗೆ 4.5 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳೆಯರಾಜ
ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಅರ್ಪಿಸಿದ್ದಾರೆ. ಅವರು ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತನಾಗಿದ್ದಾರೆ. ಈ ಹಿಂದೆಯೂ ಮೂಕಾಂಬಿಕೆಗೆ ಬಗೆಬಗೆಯ ಆಭರಣ ತೊಡಿಸಿ ಅವರು ಖುಷಿಪಟ್ಟಿದ್ದರು. ಈ ಬಾರಿ ವಜ್ರದ ಕಿರೀಟ ಸಹಿತ ಆಭರಣಗಳ ಅರ್ಪಣೆ ಮಾಡಿದ್ದಾರೆ.
ಕೊಲ್ಲೂರು ಮೂಕಾಂಬಿಕೆಗೆ (Kollur Mookambika Temple) ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ವಜ್ರದ ಕಿರೀಟ ಅರ್ಪಿಸಿದ್ದಾರೆ. ಅವರು ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತನಾಗಿದ್ದಾರೆ. ಈ ಹಿಂದೆಯೂ ಅವರು ಮೂಕಾಂಬಿಕೆಗೆ ಬಗೆಬಗೆಯ ಆಭರಣ ತೊಡಿಸಿ ಖುಷಿಪಟ್ಟಿದ್ದರು. ಈ ಬಾರಿ ವಜ್ರದ ಕಿರೀಟ (Diamond Crown) ಸಹಿತ ಆಭರಣಗಳ ಅರ್ಪಣೆ ಮಾಡಿದ್ದಾರೆ. ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗ ಸಮರ್ಪಣೆ ಮಾಡಿದ್ದಾರೆ. ಆಭರಣ ಅರ್ಪಿಸುವ ಮುನ್ನ ಮೆರವಣಿಗೆ ನಡೆಯಿತು. ದೇಗುಲದ ಆಡಳಿತ ಮಂಡಳಿ ಹಾಗೂ ಅರ್ಚಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. 4.50 ಕೋಟಿ ಮೌಲ್ಯದ ಆಭರಣ ಅರ್ಪಿಸಿ ಇಳೆಯರಾಜ ಅವರು ಭಾವುಕರಾದರು. ಮೂಕಾಂಬಿಕೆಯಿಂದ ತಮ್ಮ ಜೀವನದಲ್ಲಿ ಪವಾಡ ನಡೆದಿದೆ ಎಂಬುದು ಇಳಯರಾಜ (Ilaiyaraaja) ಅವರ ನಂಬಿಕೆ. ದೇಗುಲದ ವತಿಯಿಂದ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
