AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಳಯರಾಜ ದೂರು: ಅಜಿತ್ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿದ ನ್ಯಾಯಾಲಯ

Gud Bad Ugly: ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಕಲೆಕ್ಷನ್ ಮಾಡಲಿಲ್ಲ. ನಿರ್ಮಾಪಕರಿಗೆ ನಷ್ಟವನ್ನು ಉಂಟು ಮಾಡಿತ್ತು. ಆದರೆ ಇದೀಗ ಸಿನಿಮಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿನಿಮಾ ಅನ್ನು ಯಾವುದೇ ವೇದಿಕೆಯಲ್ಲಿ ಪ್ರದರ್ಶನ ಮಾಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಇಳಯರಾಜ ದೂರು: ಅಜಿತ್ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿದ ನ್ಯಾಯಾಲಯ
Gud Bad Ugly
ಮಂಜುನಾಥ ಸಿ.
|

Updated on: Sep 10, 2025 | 1:08 PM

Share

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ (Ajit Kumar) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಬಿಡುಗಡೆ ಆಗಿ ಕೆಲ ತಿಂಗಳುಗಳೇ ಆಗಿವೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಪ್ರದರ್ಶನವನ್ನಷ್ಟೆ ಕಂಡಿತ್ತು. ನಿರ್ಮಾಪಕರಿಗೆ ನಷ್ಟವನ್ನೇ ತಂದಿತ್ತು. ಆದರೆ ಇದೀಗ ನಿರ್ಮಾಪಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದು, ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಅನ್ನು ಟಿವಿ, ಒಟಿಟಿ ಸೇರಿದಂತೆ ಯಾವುದೇ ರೀತಿಯಾಗಿ ಪ್ರದರ್ಶನ ಮಾಡುವಂತಿಲ್ಲ ಎಂದಿದೆ.

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾನಲ್ಲಿ ಇಳಯರಾಜ ಸಂಗೀತ ನೀಡಿದ್ದ ಕೆಲ ಹಳೆಯ ಸಿನಿಮಾಗಳ ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಆ ಹಾಡುಗಳಿಗೆ ಹೊಸ ಸ್ಪರ್ಷ ನೀಡಿ ಅಜಿತ್ ಅವರ ಪಾತ್ರದ ಎಲಿವೇಷನ್​​ಗಾಗಿ ಬಳಸಲಾಗಿತ್ತು. ಆದರೆ ಇಳಯರಾಜ ಅವರು ಇದಕ್ಕೆ ಅನುಮತಿ ನೀಡಿರಲಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕ ಇಳಯರಾಜ ಅವರು ಹಕ್ಕುಚ್ಯುತಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ಆಲಿಸಿದ ಮದ್ರಾಸ್ ಹೈಕೋರ್ಟ್, ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಿದೆ. ಸಿನಿಮಾ ಪ್ರದರ್ಶಿಸಬೇಕೆಂದರೆ ಸಿನಿಮಾದಲ್ಲಿ ಬಳಸಲಾಗಿರುವ ಇಳಯರಾಜ ಅವರ ಹಾಡುಗಳನ್ನು ತೆಗೆಯಬೇಕಿದೆ.

ಇಳಯರಾಜ ಸಂಗೀತ ನೀಡಿರುವ ‘ನಾಟ್ಟುಪುರ ಪತ್ತು’, ಕಮಲ್ ಹಾಸನ್ ನಟನೆಯ ‘ಸಕಲ ವಲ್ಲವನ್’ ಹಾಗೂ ‘ವಿಕ್ರಂ’ ಸಿನಿಮಾದ ಹಾಡುಗಳನ್ನು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾನಲ್ಲಿ ಬಳಸಲಾಗಿತ್ತು. ಇಳಯರಾಜ ದೂರಿನ ಬಳಿಕ ನಿರ್ಮಾಣ ಸಂಸ್ಥೆಗೆ ಕಳಿಸಿದ್ದ ನೊಟೀಸ್​​ಗೆ ತಾವುಗಳು ಅಗತ್ಯ ಒಪ್ಪಿಗೆಯನ್ನು ಹಾಡುಗಳ ಹಕ್ಕುಗಳನ್ನು ಹೊಂದಿರುವವರಿಂದ ಪಡೆದಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಹೇಳಿತ್ತು, ಆದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲವಾಗಿತ್ತು. ಇದೇ ಕಾರಣಕ್ಕೆ ಈಗ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಲಾಗಿದೆ.

ಇದನ್ನೂ ಓದಿ:‘ಕೇಳದೆ ನಿಮಗೀಗ..’ ಚಿತ್ರದ ಹಾಡಿನ ಇತಿಹಾಸ ಹೇಳಿದ್ದ ಇಳಯರಾಜ

ಇಳಯರಾಜ ಅವರು ಹಕ್ಕುಚ್ಯುತಿ ದೂರುಗಳನ್ನು ಹಲವು ಸಿನಿಮಾಗಳ ಮೇಲೆ ದಾಖಲಿಸಿದ್ದಾರೆ. ಇಳಯರಾಜ ಅವರು ತಮ್ಮ ಸಂಗೀತದಷ್ಟೆ ಹಕ್ಕುಚ್ಯುತಿ ಪ್ರಕರಣಗಳಿಂದಲೂ ಜನಪ್ರಿಯರಾಗಿಬಿಟ್ಟಿದ್ದಾರೆ. ನಿರ್ದೇಶಕ ಶಂಕರ್ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ತಮ್ಮ ಆಪ್ತ ಮಿತ್ರ ಎಸ್​​ಪಿ ಬಾಲಸುಬ್ರಹ್ಮಣ್ಯಂ ವಿರುದ್ಧವೂ ದೂರು ದಾಖಲಿಸಿ, ತಮ್ಮ ಹಾಡುಗಳನ್ನು ಲೈವ್ ಶೋಗಳಲ್ಲಿ ಹಾಡದಂತೆ ತಡೆದಿದ್ದರು. ಸೂಪರ್ ಹಿಟ್ ಸಿನಿಮಾ ‘ಮಂಜ್ಞುಮೆಲ್ ಬಾಯ್ಸ್’, ಇತ್ತೀಚೆಗೆ ಬಿಡುಗಡೆ ಆದ ‘ಕೂಲಿ’ ಸಿನಿಮಾ ವಿರುದ್ಧ ದೂರು ದಾಖಲಿಸಿದ್ದರು.

‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾನಲ್ಲಿ ಅಜಿತ್ ನಾಯಕರಾಗಿ ನಟಿಸಿದ್ದು, ಸಿನಿಮಾ ಅನ್ನು ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಸಿನಿಮಾನಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ