ಮುಸ್ಲಿಮರಿಂದ ಗಣೇಶನಿಗೆ ವಿಶೇಷ ಪೂಜೆ: ಸದೃಢ ಭಾರತ ನಿರ್ಮಾಣಕ್ಕೆ ಕರೆ

Updated on: Aug 27, 2025 | 5:49 PM

ಕೊಳ್ಳೇಗಾಲ ಪಟ್ಟಣದ ರಾಮ ಮಂದಿರ ಬಳಿ ಪ್ರತಿಷ್ಠಾಪನೆ ಮಾಡಲಾಗಿರುವ ಗಣೇಶ ಕೋಮು ಸೌಹಾರ್ದ ಬ್ರಾತೃತ್ವಕ್ಕೆ ಸಾಕ್ಷಿಯಾಗಿದೆ. ಕೊಳ್ಳೇಗಾಲದಲ್ಲಿ ರಾಘವನ್ ಗುರೂಜಿ ಪ್ರತಿಷ್ಠಾಪನೆ ಮಾಡಿರುವ ಗಣೇಶನಿಗೆ ನಿಸಾರ್ ಅಹಮ್ಮದ್ ಹಾಗೂ ಸಂಗಡಿಗರು ಪೂಜೆ ಸಲ್ಲಿಸಿದರು. ಈ ವೇಳೆ ಸಿಹಿ ಹಂಚಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಇಲ್ಲಿ ಮುಸಲ್ಮಾನರು ತಮ್ಮ ತಾತ ಮುತ್ತಾತ ಕಾಲದಿಂದಲು ಗಣೇಶ ಚತುರ್ಥಿ ಆಚರಿಸಿಕೊಂಡು ಬಂದಿರುವುದು ವಿಶೇಷ.

ಚಾಮರಾಜನಗರ, (ಆಗಸ್ಟ್ 27): ಕೊಳ್ಳೇಗಾಲ ಪಟ್ಟಣದ ರಾಮ ಮಂದಿರ ಬಳಿ ಪ್ರತಿಷ್ಠಾಪನೆ ಮಾಡಲಾಗಿರುವ ಗಣೇಶ ಕೋಮು ಸೌಹಾರ್ದ ಬ್ರಾತೃತ್ವಕ್ಕೆ ಸಾಕ್ಷಿಯಾಗಿದೆ. ಕೊಳ್ಳೇಗಾಲದಲ್ಲಿ ರಾಘವನ್ ಗುರೂಜಿ ಪ್ರತಿಷ್ಠಾಪನೆ ಮಾಡಿರುವ ಗಣೇಶನಿಗೆ ನಿಸಾರ್ ಅಹಮ್ಮದ್ ಹಾಗೂ ಸಂಗಡಿಗರು ಪೂಜೆ ಸಲ್ಲಿಸಿದರು. ಈ ವೇಳೆ ಸಿಹಿ ಹಂಚಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಇದೇ ವೇಳೆ ಮಾತನಾಡಿದ ಮುಸ್ಲಿಂ ಮುಖಂಡ, ಜಾತಿ ಧರ್ಮವನ್ನು ಬಿಟ್ಟು ಬಲಿಷ್ಠ ಭಾರತ ನಿರ್ಮಾಣಕ್ಕೆ ಕರೆ ನೀಡಿದರು. ಇನ್ನು ಇಲ್ಲಿ ಮುಸಲ್ಮಾನರು ತಮ್ಮ ತಾತ ಮುತ್ತಾತ ಕಾಲದಿಂದಲು ಗಣೇಶ ಚತುರ್ಥಿ ಆಚರಿಸಿಕೊಂಡು ಬಂದಿರುವುದು ವಿಶೇಷ.