ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲುವಂತಾಗಲು ಸುಮಲತಾ ಅವರನ್ನೂ ಭೇಟಿಯಾಗುತ್ತೇನೆ: ಕುಮಾರಸ್ವಾಮಿ

|

Updated on: Jan 09, 2024 | 5:19 PM

ಒಂದು ಸಮಯದಲ್ಲಿ ಬಲಾಢ್ಯ ಪ್ರಾದೇಶಿಕ ಪಕ್ಷವೆಂದು ಗುರುತಿಸಿಕೊಂಡಿದ್ದ ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಸೆಕಂಡ್ ಫಿಡ್ಲ್ ಆಗಿ ಕೆಲಸ ಮಾಡುವ ಪರಿಸ್ಥಿತಿ ಬಂದಿರೋದು ದುರಂತ. ಕುಮಾರಸ್ವಾಮಿ ಮಾತಾಡುವ ಧಾಟಿ ನೋಡುತ್ತಿದ್ದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಬಿಟ್ಟುಕೊಡುವ ಸಾಧ್ಯತೆ ಕೂಡ ಇದ್ದಂತಿಲ್ಲ. ಕುಮಾರಸ್ವಾಮಿ ದೆಹಲಿಗೆ ಹೋಗಿ ಮೈತ್ರಿ ಅಂತಿಮಗೊಳಿಸಿಕೊಂಡು ಬಂದಾಗ ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ ಜೆ ಆಡಿದ ಮಾತುಗಳು ನೆನಪಿಗೆ ಬರುತ್ತವೆ.

ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ (BJP-JDS alliance) ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲುವು ಸಾಧಿಸುವಂತಾಗಲು ತಾನು ಕೇವಲ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ಮಾತ್ರವಲ್ಲ ಬೇರೆ ಯಾರೇ ಆಗಿರಲಿ, ಭೇಟಿಯಾಗಿ ಚರ್ಚೆ ನಡೆಸಲು ಸಿದ್ಧನಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಹಾಸನದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಕುಮಾರಸ್ವಾಮಿಯವರ ಮಾತುಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಸುಮಲತಾ ಅವರನ್ನು ಭೇಟಿಯಾಗಿ ಮಾತಾಡುವುದು ಕುಮಾರಸ್ವಾಮಿ ಹೇಳುತ್ತಿರುವಷ್ಟು ಸುಲಭವಾಗಿಲ್ಲ. ಬಿಜೆಪಿ ನಾಯಕ ಸೋಮಣ್ಣ, ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಕೇಳಿದ ಪ್ರಶ್ನೆಗೂ ಅವರು ಅಸಮಂಜಸ ಉತ್ತರ ನೀಡುತ್ತಾರೆ. ಮೊದಲು ಹೇಳಿದ್ದನ್ನೇ ಪುನರಾರ್ತಿಸುತ್ತಾರೆ. ಅವರ ಮಗ ನಿಖಿಲ್ ಕುಮಾರಸ್ವಾಮಿ ಅಂಜನಾದ್ರಿ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡುತ್ತಿದ್ದು ಮಂಡ್ಯ ಇಲ್ಲವೇ ಬೇರೆ ಯಾವುದಾದರೂ ಟಿಕೆಟ್ ಪಡೆಯುವ ಹರಕೆ ಹೊತ್ತಿದ್ದಾರೆಯೇ ಅಂತ ಪತ್ರಕರ್ತರು ಕೇಳಿದಾಗ ಅವರ ನೀಡಿದ ಉತ್ತರ ಯರಿಗೂ ಅರ್ಥವಾಗಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ