My India My Life Goals: ವೆರ್ಸೋವಾ ಬೀಚ್ ಪ್ಲಾಸ್ಟಿಕ್ ಮುಕ್ತ ಆಗಲು ಆಫ್ರೋಜ್ ಷಾ ಪ್ರಮುಖ ಕಾರಣ

|

Updated on: Jun 30, 2023 | 2:52 PM

ಮುಂಬೈನ ವೆರ್ಸೋವಾ ಬೀಚ್ ಪ್ಲಾಸ್ಟಿಕ್ ಮುಕ್ತ ಆಗಲು ಬಹುತೇಕ ಈ ವ್ಯಕ್ತಿಯೇ ಕಾರಣ. ಟಿವಿ9 ನಡೆಸುತ್ತಿರುವ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ (My India My Life Goals) ಅಭಿಯಾನದಲ್ಲಿ ಪಾಲ್ಗೊಂಡಿರುವ ಅಫ್ರೋಜ್ ಷಾ

ಯುವ ಮನಸ್ಸುಗಳಿಗೆ ಇವರು ಸ್ಫೂರ್ತಿ, ತನ್ನ ಚಿಕ್ಕ ವಯಸ್ಸಿನಲ್ಲೇ ಪರಿಸರದ ಬಗ್ಗೆ ಎಷ್ಟು ಕಾಳಜಿ ನೋಡಿ, ಇವರಿಂದ ಯುವಕರು ಕಲಿಬೇಕು. ಪರಿಸರದ ಬಗ್ಗೆ ಒಂದು ದೊಡ್ಡ ಜಾಗೃತಿಯನ್ನು ಬೆಳೆಸಿದವರು, ಸ್ವಚ್ಛತೆಗೆ ಇವರು ಕೂಡ ಮಹತ್ವ ಅಗಾಧವಾದದ್ದು, ಯುವ ಸಮಾಜಕ್ಕೆ ಖ್ಯಾತ ಪರಿಸರ ಕಾರ್ಯಕರ್ತ ಅಫ್ರೋಜ್ ಷಾ (Afroz Shah) ಆದರ್ಶಪ್ರಾಯ ಎನಿಸಿದ್ದಾರೆ. ಮುಂಬೈನ ವೆರ್ಸೋವಾ ಬೀಚ್ ಪ್ಲಾಸ್ಟಿಕ್ ಮುಕ್ತ ಆಗಲು ಬಹುತೇಕ ಈ ವ್ಯಕ್ತಿಯೇ ಕಾರಣ. ಟಿವಿ9 ನಡೆಸುತ್ತಿರುವ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ (My India My Life Goals) ಅಭಿಯಾನದಲ್ಲಿ ಪಾಲ್ಗೊಂಡಿರುವ ಅಫ್ರೋಜ್ ಷಾ, ಒಬ್ಬ ಸಾಮಾನ್ಯ ವ್ಯಕ್ತಿಯೂ ಹೇಗೆಲ್ಲಾ ಪರಿಸರಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ವಿಶ್ವ ಪರಿಸರ ದಿನದ ಸ್ವರ್ಣಮಹೋತ್ಸವದ ನಿಮಿತ್ತ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ ಘೋಷವಾಕ್ಯದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಟಿವಿ9 ನೆಟ್ವರ್ಕ್ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದೆ. ವಿವಿಧ ಪರಿಸರಪ್ರೇಮಿಗಳು, ಪರಿಸರ ಕಾರ್ಯಕರ್ತರನ್ನು ಟಿವಿ9 ಈ ಅಭಿಯಾನಕ್ಕೆ ಜೋಡಿಸಿಕೊಂಡಿದೆ. ಅದರಲ್ಲಿ ಅಫ್ರೋಜ್ ಶಾ ಕೂಡ ಒಬ್ಬರು.

Follow us on