My India My Life Goals: ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಜಾಧವ್ ಮೊಲಾಯ್ ಪಾಯೆಂಗ್
42 ವರ್ಷಗಳಿಂದ ಸಸಿಗಳನ್ನು ನೆಡುತ್ತಿದ್ದ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಜಾಧವ್ ಮೊಲಾಯ್ ಪಯೆಂಗ್, ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಸ್ವಂತವಾಗಿ ಮರಗಳನ್ನು ನೆಡುತ್ತಿದ್ದಾರೆ. ಅದಕ್ಕೆ ಅವರನ್ನು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ.
ಪರಿಸರ ನನ್ನ ಉಸಿರು, ಅದನ್ನು ಜೀವನದ ಮುಖ್ಯ ಹಂತ ಎಂದು ಹೇಳುವ ಅದೆಷ್ಟೋ ಪರಿಸರ ಪ್ರೇಮಿಗಳನ್ನು ನಡುವೆ ಈ ವ್ಯಕ್ತಿ ಅಗ್ರಗಣ್ಯರಾಗುತ್ತಾರೆ, ಹೌದು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ, ಈ ಹೆಸರು ದೇಶದಲ್ಲಿ ಭಾರೀ ಸದ್ದು ಮಾಡಿದೆ. ಇದೀಗ ಟಿವಿ9 ಸಂಯೋಜನೆಯಲ್ಲಿ My India My Life Goals ಎಂಬ ಅಭಿಯಾನದಲ್ಲಿ ಇವರ ಬಗ್ಗೆ ಒಂದು ಸಂದರ್ಶನವನ್ನು ನಡೆಸಿತ್ತು. ಪರಿಸರ ಸಂರಕ್ಷಣೆಗಾಗಿ 42 ವರ್ಷಗಳಿಂದ ಸಸಿಗಳನ್ನು ನೆಡುತ್ತಿದ್ದಾರೆ. ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಸ್ವಂತವಾಗಿ ಮರಗಳನ್ನು ನೆಡುತ್ತಿದ್ದಾರೆ. ಅದಕ್ಕೆ ಅವರನ್ನು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಇವರ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 1979ರಲ್ಲಿ ಆರಂಭವಾದ ಅವರ ಸೇವೆ. ಈಗಲೂ ಮುಂದುವರಿದಿದೆ. 1979 ರಲ್ಲಿ, 16 ವರ್ಷದ ಹುಡುಗನಾಗಿದ್ದಾಗ, ದಿನಕ್ಕೆ ಒಂದು ಸಸಿ ನೆಡಲು ಪ್ರಾರಂಭಿಸಿದ ಜಾದವ್ ಮೊಲಾಯ್ ಪಯೆಂಗ್ ಅವರು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂಬ ಹೆಸರಿನಿಂದಲ್ಲೇ ಜನಪ್ರಿಯವಾದರು.
Latest Videos