Karnataka Assembly Polls; ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದರಿಂದ ಬೇರೆ ಪಕ್ಷದ ನಾಯಕರೊಂದಿಗಿನ ನನ್ನ ಸಂಬಂಧ ಹಳಸಲಾರದು: ಸುದೀಪ್

|

Updated on: May 01, 2023 | 11:06 AM

ಬಿಜೆಪಿ ಪರ ರೋಡ್ ಶೋಗಳನ್ನು ಮಾಡುತ್ತಿರುವುದು ಹೊಸ ಹೊಸ ಸಂಗತಿಗಳನ್ನು ಕಲಿಯುವ ಮತ್ತು ಅರಿತುಕೊಳ್ಳುವ ಸದವಾಕಾಶ ಕಲ್ಪಿಸಿದೆ ಎಂದು ಸುದೀಪ್ ಹೇಳಿದರು.

ಬೆಂಗಳೂರು: ಚಿತ್ರನಟ ಕಿಚ್ಚ ಸುದೀಪ್ (Kiccha Sudeep) ಒಂದು ಚಿಕ್ಕ ಬ್ರೇಕ್ ನಂತರ ಇಂದಿನಿಂದ ಪುನಃ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಿಳಿಯಲಿದ್ದು ಬೆಳಗಾವಿಯ 5 ಕ್ಷೇತ್ರಗಳಲ್ಲಿ ಸೋಮವಾರ ರೋಡ್ ಶೋ ನಡೆಸಲಿದ್ದಾರೆ. ಬೆಳಗಾವಿಗೆ ಹೊರಡುವ ಮೊದಲು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತಾಡಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತನ್ನ ಬಗ್ಗೆ ಮಾಡಿರುವ ಟೀಕೆ ಕ್ರೀಡಾಸ್ಫೂರ್ತಿಯಿಂದ (sport) ಸ್ವೀಕರಿಸಿರುವ ಅವರು ಚುನಾವಣಾ ಪ್ರಚಾರದಿಂದ ಬೇರೆ ನಾಯಕರ ಜೊತೆ ಮೊದಲಿನಿಂದ ಇದ್ದ ಸಂಬಂಧ ಹಾಳಾಗಲಾರದು, ರಾಜಕಾರಣಿಗಳು ಎದುರಾಳಿಗಳ ಬಗ್ಗೆ ವಿಡಂಬನಾತ್ಮಕವಾಗಿ ಮಾತಾಡುವುದು ಸಹಜವೇ ಎಂದ ಸುದೀಪ್ ಹೇಳಿದರು. ಬಿಜೆಪಿ ಪರ ರೋಡ್ ಶೋಗಳನ್ನು ಮಾಡುತ್ತಿರುವುದು ಹೊಸ ಹೊಸ ಸಂಗತಿಗಳನ್ನು ಕಲಿಯುವ ಮತ್ತು ಅರಿತುಕೊಳ್ಳುವ ಸದವಾಕಾಶ ಕಲ್ಪಿಸಿದೆ ಎಂದು ಸುದೀಪ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ