Unaccounted money in Vidhana Soudha: ಪೊಲೀಸರು ವಿಚಾರಣೆ ನಡೆಸುವಾಗ ಹೇಳಿಕೆ ನೀಡಿದರೆ ತಪ್ಪಾಗುತ್ತದೆ: ಆರಗ ಜ್ಞಾನೇಂದ್ರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 05, 2023 | 12:52 PM

ಪ್ರಕರಣದ ಬಗ್ಗೆ ತಾವು ಮಾತಾಡಿದರೆ, ಪೊಲೀಸರು ನಡೆಸುತ್ತಿರುವ ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ, ಎಂದು ಗೃಹ ಸಚಿವರು ಹೇಳಿದರು.

ಬೆಂಗಳೂರು: ವಿಧಾನ ಸೌಧದಲ್ಲಿ (Vidhana Soudha) ದಾಖಲೆಯಿಲ್ಲದ ರೂ.10.5 ಲಕ್ಷ ಹಣ ಸಿಕ್ಕಿದ್ದು ಅದರ ಬಗ್ಗೆ ರಾಜ್ಯದ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ (Araga Jnanendra) ಅವರು ಹೇಳಿಕೆ ನೀಡಿದ್ದಾರೆ. ಹಣವನ್ನು ಪೋಲಿಸರು ವಶಕ್ಕೆ ಪಡೆದು ಅದನ್ನು ಇಟ್ಟುಕೊಂಡಿದ್ದ ವ್ಯಕ್ತಿಯ ವಿಚಾರಣೆ (interrogate) ನಡೆಸುತ್ತಿದ್ದಾರೆ. ಅವನು ಯಾವ ಉದ್ದೇಶಕ್ಕಾಗಿ ಹಣವಿಟ್ಟುಕೊಂಡಿದ್ದ, ಯಾರಿಗೆ ತಲುಪಿಸುವವನಿದ್ದ ಅನ್ನೋದು ಪೊಲೀಸರ ವಿಚಾರಣೆಯ ನಂತರ ಗೊತ್ತಾಗುತ್ತದೆ. ಪ್ರಕರಣದ ಬಗ್ಗೆ ತಾವು ಮಾತಾಡಿದರೆ, ಪೊಲೀಸರು ನಡೆಸುತ್ತಿರುವ ಪ್ರಾಮಾಣಿಕ ಮತ್ತು ಪಾರದರ್ಶಕ ತನಿಖೆಯ ಮೇಲೆ ಪ್ರಭಾವ ಉಂಟು ಮಾಡುತ್ತದೆ, ಎಂದು ಗೃಹ ಸಚಿವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ