Chitradurga: ಮಾಚಿದೇವ ಮಠದಲ್ಲಿ ಕಾಯಕ ಜನೋತ್ಸವಕ್ಕೆ ಚಾಲನೆ ನೀಡುವಾಗ ಮುಖ್ಯಮಂತ್ರಿ ಬೊಮ್ಮಾಯಿಯವರು ಬಿಎಸ್ ಯಡಿಯೂರಪ್ಪರನ್ನು ಕಡೆಗಣಿಸಿದರೆ?

Chitradurga: ಮಾಚಿದೇವ ಮಠದಲ್ಲಿ ಕಾಯಕ ಜನೋತ್ಸವಕ್ಕೆ ಚಾಲನೆ ನೀಡುವಾಗ ಮುಖ್ಯಮಂತ್ರಿ ಬೊಮ್ಮಾಯಿಯವರು ಬಿಎಸ್ ಯಡಿಯೂರಪ್ಪರನ್ನು ಕಡೆಗಣಿಸಿದರೆ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 05, 2023 | 3:00 PM

ಯಡಿಯೂರಪ್ಪನವರು ಮತ್ತೊಂದು ಬದಿಯಲ್ಲಿ ಹಗ್ಗಕ್ಕೆ  ಕೈ ಮಾತ್ರ ಹಚ್ಚಿದರು ಅದರೆ ಅದನ್ನು ಎಳೆದು ಗಂಟೆ ಬಾರಿಸಲು ಮುಖ್ಯಮಂತ್ರಿಗಳು ಆಹ್ವಾನಿಸಲಿಲ್ಲ!

ಚಿತ್ರದುರ್ಗದ ಮಾಚಿದೇ ಮಠದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾಯಕ ಜನೋತ್ಸವ (Kayaka Janotsava) ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಗಂಟೆ ಬಾರಿಸಿ ಚಾಲನೆ ನೀಡುವಾಗ ನಡೆದ ಒಂದು ಸೂಕ್ಷ್ಮ ಸಂಗತಿ ಕೆಮೆರಾ ಕಣ್ಣಿಗೆ ಬಿದ್ದಿದೆ. ಇಂಥ ಕಾರ್ಯಕ್ರಮಗಳಲ್ಲಿ ತಮ್ಮೊಂದಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಇದ್ದರೆ ಬೊಮ್ಮಾಯಿ ಸಾಮಾನ್ಯವಾಗಿ ‘ಪಹೆಲೆ ಆಪ್’ ಅಂತ ತಮ್ಮ ರಾಜಕೀಯ ಗುರು ಎಂದು ಭಾವಿಸುವ ಹಿರಿಯ ಮುತ್ಸದ್ದಿಗೆ ಹೇಳಿ ಗೌರವ ಸೂಚಿಸುತ್ತಾರೆ. ಆದರೆ ಮಾಚಿದೇವ ಮಠದಲ್ಲಿ ಅಂಥದ್ದೇನೂ ನಡೆಯಲಿಲ್ಲ. ಯಡಿಯೂರಪ್ಪನವರು ಮತ್ತೊಂದು ಬದಿಯಲ್ಲಿ ಹಗ್ಗಕ್ಕೆ  ಕೈ ಮಾತ್ರ ಹಚ್ಚಿದರು ಅದರೆ ಅದನ್ನು ಎಳೆದು ಗಂಟೆ ಬಾರಿಸಲು ಮುಖ್ಯಮಂತ್ರಿಗಳು ಆಹ್ವಾನಿಸಲಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ