ನನ್ನ ಪತ್ನಿ ನಡತೆಗೆಟ್ಟವಳು, ಅವಳೇ ಮಗುವನ್ನು ಕೊಂದಿದ್ದು: ರಘು, ಮಗು ಕೊಂದ ಅರೋಪಿ ಶ್ವೇತಾ ಪತಿ

ಅರುಣ್​ ಕುಮಾರ್​ ಬೆಳ್ಳಿ

Updated on: Jun 09, 2025 | 10:13 AM

ಶ್ವೇತಾ ಮತ್ತು ರಘು ವಿವಾಹ 2018ರಲ್ಲಿ ನಡೆದಿದ್ದು. ಮೊದಲೆರಡು ವರ್ಷಗಳ ಕಾಲ ದಂಪತಿ ಅನ್ಯೋನ್ಯವಾಗಿದ್ದರು, ಅದರೆ ನಂತರದ ವರ್ಷಗಳಲ್ಲಿ ಅವರ ನಡುವೆ ವಿರಸ ಶುರುವಾಗಿದೆ. ನೆಲಮಂಗಲದಲ್ಲಿ ವಾಸವಾಗಿರುವ ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ರಘು ಹೇಳುವ ಪ್ರಕಾರ ಅವರ ತಾಯಿಯ ಮೇಲೆ ಶ್ವೇತಾ ದೈಹಿಕ ಹಲ್ಲೆ ನಡೆಸಿ ಹಿಂಸಿಸುತ್ತಿದ್ದಳು, ಮತ್ತು ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದಳು.

ಹಾಸನ, ಜೂನ್ 9: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಹೆಸರಿನ ಗ್ರಾಮದಲ್ಲಿ ನಿನ್ನೆ 6-ವರ್ಷದ ಮಗು ಸಾನ್ವಿಯನ್ನು 36-ವರ್ಷದ ತಾಯಿ ಶ್ವೇತಾಳೇ (Shwetha) ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ ಎಂದು ಆಕೆಯ ಪತಿ ರಘು ಬಲವಾಗಿ ಅರೋಪಿಸುತ್ತಿದ್ದಾರೆ. ಮಾಧ್ಯಮಗಳ ಜೊತೆ ದುಃಖವನ್ನು ತಡೆಯಲಾಗದೆ ಅಳುತ್ತಾ ಮಾತಾಡಿದ ರಘು, ತನ್ನ ಹೆಂಡತಿಗೆ ಗಾರ್ಮೆಂಟ್ಸ್​ ಕೆಲಸಕ್ಕೆ ಹೋಗುತ್ತಿದ್ದ ಕಂಪನಿಯಲ್ಲಿ ಯಾವನದ್ದೋ ಜೊತೆ ಅಕ್ರಮ ಸಂಬಂಧ ಇತ್ತು, ಪ್ರಾಯಶಃ ಅದೇ ಕಾರಣಕ್ಕೆ ಅವಳು ಮಗುವನ್ನು ಸಾಯಿಸಿದ್ದಾಳೆ ಎಂದು ಹೇಳುವ ರಘು ತನ್ನ ಪತ್ನಿಯನ್ನು ಶೀಲಗೆಟ್ಟವಳು ಎಂದು ಆರೋಪಿಸುತ್ತಾರೆ.

ಇದನ್ನೂ ಓದಿ:  Dharwad Mother: ಕಾಮದಾಹಕ್ಕೆ ಅಡ್ಡಿಯಾಗಿದ್ದ ಸ್ವಂತ ವಿಕಲಾಂಗ ಮಗಳ ಕತ್ತು ಕತ್ತರಿಸಿ ಸಾಯಿಸಿದ ಮಹಿಳೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.