Mysore Dasara 2022: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುವಾಗ ಭದ್ರತಾ ಸಿಬ್ಬಂದಿ ಸ್ಥಳ ಬಿಟ್ಟು ಹೋಗಿದ್ದು ಆಘಾತಕಾರಿ!

Edited By:

Updated on: Sep 26, 2022 | 12:54 PM

ಆದರೆ, ವೇದಿಕೆ ಮೇಲಿದ್ದ ಭದ್ರತಾ ಸಿಬ್ಬಂದಿಯ ವರ್ತನೆ ಧಿಗ್ಭ್ರಮೆ ಮತ್ತು ಆಘಾತ ಮೂಡಿಸುತ್ತದೆ. ಸ್ಥಳ ಬಿಟ್ಟು ಹೋಗುವ ಸಿಬ್ಬಂದಿ ರಾಷ್ಟ್ರಪತಿಗಳ ಮುಂದಿನ ಮೈಕ್ ಸರಿಪಡಿಸುವ ಘಟನೆಯೂ ನಡೆಯುತ್ತದೆ.

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮ (President Droupadi Murmu) ಅವರು ಇಂದು ಮೈಸೂರು ದಸರಾ ಉತ್ಸವ 2022 ಕ್ಕೆ ಚಾಲನೆ ನೀಡಿದರು. ರಾಷ್ಟ್ರಪತಿಗಳು ಕನ್ನಡದಲ್ಲಿ ಭಾಷಣ ಆರಂಭಿಸಿದ್ದು ಸಮಾರಂಭದ ಮತ್ತೊಂದು ವಿಶೇಷವಾಗಿತ್ತು. ಆದರೆ ಎಲ್ಲರ ಗಮನ ಸೆಳೆದ ಸಂಗತಿಯೆಂದರೆ ರಾಷ್ಟ್ರಪತಿಗಳು ಮಾತಾಡುವಾಗ ಭದ್ರತಾ ಸಿಬ್ಬಂದಿ ಏನನ್ನೋ ಮಾತಾಡಿದ್ದು ಮತ್ತು ರಾಷ್ಟ್ರಪತಿಗಳ ಬಲಭಾಗಕ್ಕಿರುವ ಸಿಬ್ಬಂದಿ ಸ್ಥಳಬಿಟ್ಟು ಹೋಗಿದ್ದು. ರಾಷ್ಟ್ರಪತಿಗಳಿಗೆ ಜೆಡ್ ಪ್ಲಸ್ ಸೆಕ್ಯುರಿಟಿ ನೀಡಲಾಗಿರುತ್ತದೆ. ಆದರೆ, ವೇದಿಕೆ ಮೇಲಿದ್ದ ಭದ್ರತಾ ಸಿಬ್ಬಂದಿಯ ವರ್ತನೆ ಧಿಗ್ಭ್ರಮೆ ಮತ್ತು ಆಘಾತ ಮೂಡಿಸುತ್ತದೆ. ಸ್ಥಳ ಬಿಟ್ಟು ಹೋಗುವ ಸಿಬ್ಬಂದಿ ರಾಷ್ಟ್ರಪತಿಗಳ ಮುಂದಿನ ಮೈಕ್ ಸರಿಪಡಿಸುವ ಘಟನೆಯೂ ನಡೆಯುತ್ತದೆ.

Published on: Sep 26, 2022 12:38 PM