ಮೈಸೂರು ದಸರಾ 2024: ಜಂಬೂಸವಾರಿ ಸಿದ್ದತೆಯನ್ನು ಲೈವ್ ಆಗಿ ನೋಡಿ​

|

Updated on: Oct 12, 2024 | 9:16 AM

ನವರಾತ್ರಿ ಬಳಿಕ ಬರುವುದು ವಿಜಯದಶಮಿ. ಈ ದಿನ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗುತ್ತಾನೆ. ಜಂಬೂಸವಾರಿಗೆ ತಯಾರಿ ಜೋರಾಗಿದೆ. ಜಂಬೂಸವಾರಿ ತಯಾರಿಯನ್ನು ಲೈವ್​ ಆಗಿ ನೋಡಿ.

ಇಂದು (ಅ.12) ವಿಜಯದಶಮಿ (ದಸರಾ) ನಿಮಿತ್ತ ಅರಮನೆ ನಗರಿ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಆನೆ ರಾಜ ಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಸಾಗುತ್ತಾನೆ. ಜಂಬೂಸವಾರಿಗೆ ಅರಮನೆ ಆವರಣದಲ್ಲಿ ತಯಾರಿ ಜೋರಾಗಿದೆ. ಜಂಬೂಸವಾರಿ ತಯಾರಿಯನ್ನು ಲೈವ್​ ಆಗಿ ನೋಡಿ