ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ; ವಿಡಿಯೋ ನೋಡಿಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ; ವಿಡಿಯೋ ನೋಡಿ

|

Updated on: Oct 12, 2024 | 11:35 AM

ಮೈಸೂರಿನಲ್ಲಿ ಇಂದು ನಡೆಯುವ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮೈಸೂರಿಗೆ ತೆರಳಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಿಎಂ ಮತ್ತು ಡಿಸಿಎಂ ಅವರಿಗೆ ಪಂಚಲೋಹದ ವಿಗ್ರಹ ಉಡುಗೊರೆಯಾಗಿ ನೀಡಲಾಗುತ್ತದೆ.

ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು (ಅ.12) ಜಂಬೂಸವಾರಿ ನಡೆಯಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮೈಸೂರಿಗೆ ತೆರಳಿದ್ದಾರೆ. ಸಿಎಂ ಮತ್ತು ಡಿಸಿಎಂ ನಂದಿಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಪೂಜೆ ಬಳಿಕ ಮೈಸೂರು ಜಿಲ್ಲಾಡಳಿತ ಸಿಎಂ ಮತ್ತು ಡಿಸಿಎಂಗೆ ಪಂಚಲೋಹದ ವಿಗ್ರಹ ಉಡುಗೊರೆಯಾಗಿ ನೀಡಲಿದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ನಾಡದೇವತೆ ತಾಯಿ ಚಾಮುಂಡೇಶ್ವರಿ ಮೂರ್ತಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಕಾಡಸಿದ್ದೇಶ್ವರ ಮೂರ್ತಿ ನೀಡಲಾಗುತ್ತದೆ. ಈ ಮೂರ್ತಿಗಳನ್ನು ಮೈಸೂರು ಶಿಲ್ಪಿ ರಾಜೇಶ್‌‌ ಅವರು ಪಂಚಲೋಹದ ವಿಗ್ರಹಗಳನ್ನು ಒಂದು ವಾರದಲ್ಲಿ ತಯಾರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ