ಮೈಸೂರು ದಸರಾ 2026: ಈ ಬಾರಿ ಜಟ್ಟಿ ಕಾಳಗ ಸ್ಥಗಿತ ಆಗಿದ್ಯಾಕೆ? ರಾಜಮಾತೆ ಪ್ರಮೋದಾ ದೇವಿ ಏನು ಹೇಳಿದ್ರು ನೋಡಿ
ಮೈಸೂರು ದಸರಾ ಮಹೋತ್ಸವದ ಬಳಿಕ ಚಾಮುಂಡಿ ಬಟ್ಟದಲ್ಲಿ ನಡೆದ ಚಾಮುಂಡೇಶ್ವರಿ ರಥೋತ್ಸವ ಯಶಸ್ವಿಯಾಗಿ ನೆರವೇರಿತು.ಜಟ್ಟಿ ಕಾಳಗ ಸ್ಥಗಿತಗೊಂಡ ಕುರಿತು ರಾಜಮಾತೆ ಪ್ರಮೋದಾ ದೇವಿ ಪ್ರತಿಕ್ರಿಯಿಸಿ, ಈ ಕುರಿತು ಶೀಘ್ರದಲ್ಲೇ ಸ್ಪಷ್ಟನೆ ನೀಡುವ ಭರವಸೆ ನೀಡಿದ್ದಾರೆ. ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಹೇಳುವ ಮೂಲಕ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಜನರಿಗೆ ಧೈರ್ಯ ತುಂಬಿದ್ದಾರೆ.
ಮೈಸೂರು, ಅಕ್ಟೋಬರ್ 24: ಮೈಸೂರು ದಸರಾ ಮಹೋತ್ಸವದ ಬಳಿಕ ಚಾಮುಂಡಿ ಬಟ್ಟದಲ್ಲಿ ನಡೆದ ಚಾಮುಂಡೇಶ್ವರಿ ರಥೋತ್ಸವ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ರಥೋತ್ಸವದ ಯಶಸ್ಸು ಮತ್ತು ಮಳೆಯ ಮೂಲಕ ಶುಭ ಸಂಕೇತಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅಂಬಾರಿ ಮೆರವಣಿಗೆಯಲ್ಲಿ ಪ್ರಶಾಂತ ಆನೆ ಅತ್ಯಂತ ಸುಗಮವಾಗಿ ವರ್ತಿಸಿತು ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ದಸರಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಜಟ್ಟಿ ಕಾಳಗದ ಕುರಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿತ್ತು. ಈ ಬಗ್ಗೆ ಕೇಳಿದಾಗ, ಪ್ರಮೋದಾ ದೇವಿ ಅವರು ದೇವಾಲಯದ ಆವರಣದಲ್ಲಿ ಈ ಬಗ್ಗೆ ಮಾತನಾಡುವುದನ್ನು ನಿರಾಕರಿಸಿದರು. ಆದರೆ, ಜಟ್ಟಿ ಕಾಳಗದ ಸ್ಥಗಿತಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಸಮಗ್ರ ಸ್ಪಷ್ಟನೆ ನೀಡುವುದಾಗಿ ಭರವಸೆ ನೀಡಿದರು. ತಾಳ್ಮೆಯಿಂದ ಕಾಯುವಂತೆ ಸಾರ್ವಜನಿಕರನ್ನು ಕೋರಿದ ಅವರು, ತಮ್ಮ ಮನೆ ಪೂಜೆಗಳ ನಿಮಿತ್ತ ತಾನು ಕಾರ್ಯನಿರತರಾಗಿದ್ದರಿಂದ ಹಲವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ದೈವಭಕ್ತಿಯನ್ನು ನಂಬಿದ ಮೇಲೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
