ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ ಗೌಡ
ನಾಡಹಬ್ಬ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಜಂಬೂ ಸವಾರಿ ನೋಡಲು ಲಕ್ಷಾಂತರ ಜನರು ಸೇರಿದ್ದಾರೆ. ಈ ಬಾರಿ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಕೂಡ ದಸರಾ ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಅದರಿಂದಾಗಿ ತಾರಾ ಮೆರುಗು ಹೆಚ್ಚಿದೆ. ಎಲ್ಲರೂ ಟಿವಿ9 ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ನಾಡಹಬ್ಬ ದಸರಾವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಜಂಬೂ ಸವಾರಿ ನೋಡಲು ಲಕ್ಷಾಂತರ ಜನರು ಸೇರಿದ್ದಾರೆ. ಈ ಬಾರಿ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಕೂಡ ದಸರಾ ಹಬ್ಬದಲ್ಲಿ ಭಾಗಿ ಆಗಿದ್ದಾರೆ. ಅದರಿಂದಾಗಿ ತಾರಾ ಮೆರುಗು ಹೆಚ್ಚಿದೆ. ಹಿರಿಯ ಕಲಾವಿದರು ಹಾಗೂ ಹೊಸ ತಲೆಮಾರಿನ ನಟ-ನಟಿಯರು, ತಂತ್ರಜ್ಞರು ದಸರಾ ಹಬ್ಬದ ಸಲುವಾಗಿ ಮೈಸೂರಿನಲ್ಲಿ ಒಟ್ಟಿಗೆ ಸೇರಿದ್ದಾರೆ. ಇದರಿಂದಾಗಿ ಖುಷಿಯಾಗಿರುವ ಎಲ್ಲರೂ ಟಿವಿ9 ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ ಗೌಡ, ದೊಡ್ಡಣ್ಣ, ಸುಂದರ್ ರಾಜ್, ವಿಜಯಲಕ್ಷ್ಮಿ ಸಿಂಗ್, ಹೇಮಾ ಚೌಧರಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮಗೆ ದಸರಾ ಎಂದರೆ ಎಷ್ಟು ವಿಶೇಷ ಎಂಬುದನ್ನು ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
