ರೂಬಿಕ್ಸ್ ಕ್ಯೂಬ್ನಲ್ಲಿ ಮೂಡಿದ ಶ್ರೀರಾಮ: 12 ವರ್ಷದ ಬಾಲಕನ ಭಕ್ತಿಗೆ ಜನರ ಮೆಚ್ಚುಗೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮೃದುಲಾ ಹಾಗೂ ವಿನಯ್ ದಂಪತಿ ಪುತ್ರ ಪ್ರಣವ್ 498 ರೂಬಿಕ್ಸ್ ಕ್ಯೂಬ್ ಬಳಸಿ ಶ್ರೀರಾಮನ ಚಿತ್ರ ಬಿಡಿಸಿದ್ದಾನೆ. ಪ್ರಣವ್ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಪ್ರಣವ್ ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ.
ಮೈಸೂರು, ಜನವರಿ 12: ಅಯೋಧ್ಯೆಯಲ್ಲಿ (Ayodhye) ಭವ್ಯವಾದ ಶ್ರೀರಾಮ (Sriram) ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಪ್ರಭು ಶ್ರೀರಾಮಚಂದ್ರನ ಬಾಲ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರಾಮ ಜಪ ಶರುವಾಗಿದೆ. ಶ್ರೀರಾಮನ ಅಲೆ ಎದ್ದಿದ್ದು, ದೇಶದ ಎಲ್ಲ ಮೂಲೆಯಲ್ಲಿ ರಾಮನ ಜಪ ಮತ್ತು ಭಾವಚಿತ್ರ ಕಾಣುತ್ತಿವೆ. ಹಾಡು ಹಾಡುವುದರ ಮುಖಾಂತರ, ಚಿತ್ರ ಬಿಡಿಸುವ ಮುಖಾಂತರ ಅಥವಾ ಇನ್ನೂ ಅನೇಕ ರೀತಿಯಲ್ಲಿ ಜನರು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಇಲ್ಲೊಬ್ಬ 12 ವರ್ಷದ ಬಾಲಕ ರೂಬಿಕ್ಸ್ ಕ್ಯೂಬ್ (Rubik’s Cube) ನಲ್ಲಿ ಶ್ರೀರಾಮನ ಭಾವಚಿತ್ರ ಮೂಡಿಸಿದ್ದಾನೆ.
ಹೌದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮೃದುಲಾ ಹಾಗೂ ವಿನಯ್ ದಂಪತಿ ಪುತ್ರ ಪ್ರಣವ್ 498 ರೂಬಿಕ್ಸ್ ಕ್ಯೂಬ್ ಬಳಸಿ ಶ್ರೀರಾಮನ ಚಿತ್ರ ಬಿಡಿಸಿದ್ದಾನೆ. ಪ್ರಣವ್ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಪ್ರಣವ್ ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ.