ಮೈಸೂರು: ಆಶ್ರಯ ಯೋಜನೆಗೆ ಮಂಜೂರಾಗಿದ್ದ ಜಮೀನು ಒತ್ತುವರಿ, ತಹಶೀಲ್ದಾರ್ ನೇತೃತ್ವದಲ್ಲಿ ತೆರವು

ಮೈಸೂರಿನಲ್ಲಿ ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಮಡು ಹಸುವಿನ ಕೊಟ್ಟಿಗೆ ಕಟ್ಟಲಾಗಿದೆ. ತಹಶೀಲ್ದಾರ್ ಟಿ.ಎನ್.ಗಿರೀಶ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದು ಹಸುವಿನ ಕೊಟ್ಟಿಗೆ ನೆಲಸಮ ಮಾಡಲಾಗಿದೆ.

ಮೈಸೂರು: ಆಶ್ರಯ ಯೋಜನೆಗೆ ಮಂಜೂರಾಗಿದ್ದ ಜಮೀನು ಒತ್ತುವರಿ, ತಹಶೀಲ್ದಾರ್ ನೇತೃತ್ವದಲ್ಲಿ ತೆರವು
| Updated By: ಆಯೇಷಾ ಬಾನು

Updated on:Aug 20, 2023 | 10:26 AM

ಮೈಸೂರು, ಆ.20: ಆಶ್ರಯ ಯೋಜನೆಗೆ ಮಂಜೂರಾಗಿದ್ದ ಜಮೀನು ಒತ್ತುವರಿ ಹಿನ್ನೆಲೆ ಮೈಸೂರು ತಾಲೂಕು ತಹಶೀಲ್ದಾರ್ ಟಿ.ಎನ್.ಗಿರೀಶ್(TN Girish) ನೇತೃತ್ವದಲ್ಲಿ ಆನಂದೂರಿನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆಶ್ರಯ ಯೋಜನೆಗಾಗಿ ಮಂಜೂರಾಗಿದ್ದ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿಕೊಮಡು ಹಸುವಿನ ಕೊಟ್ಟಿಗೆ ಕಟ್ಟಲಾಗಿದೆ. ತಹಶೀಲ್ದಾರ್ ಟಿ.ಎನ್.ಗಿರೀಶ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದು ಹಸುವಿನ ಕೊಟ್ಟಿಗೆ ನೆಲಸಮ ಮಾಡಲಾಗಿದೆ.

1996ರಲ್ಲಿ ಆಶ್ರಯ ಯೋಜನೆಗಾಗಿ 4 ಎಕರೆ ಮಂಜೂರಾಗಿತ್ತು. ಸದರಿ ಜಮೀನಿನಲ್ಲಿ ಆನಂದೂರು ಗ್ರಾಮದ ಗವಿರಂಗೇಗೌಡ ಹಾಗೂ ಇತರರು 20 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದ ಆರೋಪ ಕೇಳಿ ಬಂದಿದ್ದು ಆನಂದೂರು ಗ್ರಾಮದ ಸರ್ವೆ ನಂಬರ್ 6ರಲ್ಲಿ ಒತ್ತುವರಿ ತೆರವು ಮಾಡಲಾಗುತ್ತಿದೆ.

Published On - 10:26 am, Sun, 20 August 23

Follow us