Mysore News: ಹೆಲ್ಮೆಟ್ ಒಳಗೆ ಸೇರಿಕೊಂಡಿದ್ದ ನಾಗರಹಾವು ರಕ್ಷಣೆ; ವಿಡಿಯೋದಲ್ಲಿ ನೋಡಿ

|

Updated on: May 30, 2023 | 8:28 AM

ಮೈಸೂರಿನ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿ ಸುಬ್ರಮಣ್ಯ ಎಂಬುವವರ ಮನೆಯ ದ್ವಿಚಕ್ರ ವಾಹನದ ಮೇಲೆ ಇಟ್ಟಿದ್ದ ಹೆಲ್ಮೆಟ್ ಒಳಗಡೆ ನಾಗರಹಾವೊಂದು ಸೇರಿಕೊಂಡಿರುವ ಘಟನೆ ನಡೆದಿದೆ.

ಮೈಸೂರು: ಇದೀಗ ಹಾವು(snake)ಗಳು ಎಲ್ಲಿ ಬೇಕಾದರೂ ಸೇರಿಕೊಳ್ಳುತ್ತೀವೆ, ಇತ್ತೀಚೆಗಷ್ಟೇ ಕಾರಿನ ಡಿಕ್ಕಿಯಲ್ಲಿ ಹಾವೊಂದು ಸೇರಿಕೊಂಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಅದರಂತೆ ಇದೀಗ ಮೈಸೂರಿ(mysore)ನ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿ ಸುಬ್ರಮಣ್ಯ ಎಂಬುವವರ ಮನೆಯ ದ್ವಿಚಕ್ರ ವಾಹನ(Two Wheeler)ದ ಮೇಲೆ ಇಟ್ಟಿದ್ದ ಹೆಲ್ಮೆಟ್ ಒಳಗಡೆ ನಾಗರಹಾವೊಂದು ಸೇರಿಕೊಂಡಿರುವ ಘಟನೆ ನಡೆದಿದೆ. ಹೌದು ಹೆಲ್ಮೆಟ್​ ಒಳಗಡೆ ಸೇರಿದ ಹಾವನ್ನ ಉರುಗ ಸಂರಕ್ಷಕ‌ ಸ್ನೇಕ್ ಶ್ಯಾಮ್‌(Snake shyam)ಅವರು ರಕ್ಷಣೆ ಬಂದು ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಇನ್ನು ಬಿಸಿಲ ಬೇಗೆಗೆ ಹಾವಿನ ಮರಿಗಳು ಹೆಚ್ಚಾಗಿ ಆಚೆ ಬರುತ್ತವೆ. ಎಲ್ಲೇ ಹಾವು ಕಾಣಿಸಿದರು ನನಗೆ ಕರೆ ಮಾಡಿ ಎಂದು ಮೊಬೈಲ್ ನಂಬರ್ ನೀಡಿ ಸ್ನೇಕ್ ಶ್ಯಾಮ್ ಮನವಿ ಮಾಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 30, 2023 06:54 AM