Updated on:May 26, 2023 | 3:10 PM
ರಾತ್ರಿ ವೇಳೆ ಮನುಷ್ಯ ಮಲಗಿದ್ದಲ್ಲಿ ಬಂದು ಕಡಿಯುವ ವಿಷಕಾರಿ ಹಾವು ಇಂಡಿಯನ್ ಕಾಮನ್ ಕ್ರೈಟ್ ಹಾವೊಂದು ಕಾರಿನ ಅಡಿ ಪತ್ತೆಯಾದ ಘಟನೆ ಗದಗದಲ್ಲಿ ನಡೆದಿದೆ.
ಸರ್ವಿಸ್ ಮಾಡಲೆಂದು ವ್ಯಕ್ತಿಯೊಬ್ಬರು ತನ್ನ ಕಾರನ್ನು ಗದಗ ಜಿಲ್ಲೆಯ ನರಗುಂದ ಪಟ್ಟಣದ ಗ್ಯಾರೇಜ್ನಲ್ಲಿ ತಂದಿಟ್ಟಿದ್ದಾರೆ.
ಕೆಲಸಗಾರರು ಕಾರು ಸರ್ವಿಸ್ ಮಾಡುವ ವೇಳೆ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಉರಗಪ್ರೇಮಿಗೆ ಮಾಹಿತಿ ನೀಡಿ ಕರೆಸಲಾಯಿತು. ಅದರಂತೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಬುಡ್ನಾ, ಕಾರಿನ ಬಾನೆಟ್ ಕೆಳಭಾಗದಲ್ಲಿ ಅವಿತ್ತಿದ್ದ ಹಾವನ್ನು ರಕ್ಷಿಸಿದ್ದಾರೆ.
ಸ್ನೇಕ್ ಬುಡ್ನಾ ಪ್ರಕಾರ, ಕಾರಿನಡಿ ಪತ್ತೆಯಾದ ಹಾವು ಇಂಡಿಯನ್ ಕಾಮನ್ ಕ್ರೈಟ್. ಈ ಹಾವಿನ ವಿಷ ನಾಗರಹಾವಿಗಿಂತಲೂ ನಾಲ್ಕು ಪಟ್ಟು ಹೆಚ್ಚಿದೆ. ರಾತ್ರಿ ವೇಳೆ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಹಾವನ್ನು ರಾತ್ರಿ ಹಾವು ಅಂತಾನೂ ಕರೆಯುತ್ತಾರೆ. ಮುನುಷ್ಯ ಮಲಗಿದ್ದಲ್ಲಿ ಬಂದ ಕಡಿಯುವುದೇ ಹೆಚ್ಚು.
ಬುಡ್ನಾ ಸಾಬ್ ಹೇಳುವಂತೆ, ಅವರು ಈ ಹಾವನ್ನು ಮೊದಲಬಾರಿ ಹಿಡಿದಿದ್ದಾರೆ. ಇದಕ್ಕೂ ಮುನ್ನ ಸಾವನ್ನಪ್ಪಿದ್ದ ಇದೇ ಹಾವನ್ನು ನೋಡಿದ್ದರಷ್ಟೆ. ಸದ್ಯ ಈ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
Published On - 12:34 pm, Fri, 26 May 23