ಮೈಸೂರು: ಸಫಾರಿ ವೇಳೆ ರಸ್ತೆಗೆ ಬಂದ ಹುಲಿ ವಾಹನಗಳ ಮಧ್ಯೆಯೇ ರಸ್ತೆ ದಾಟಿದ ಅಪರೂಪದ ವಿಡಿಯೋ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ
ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ ಸಫಾರಿ ವೇಳೆ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ. ಸಫಾರಿ ವಾಹನಗಳ ನಡುವೆಯೇ ರಾಜಗಾಂಭಿರ್ಯದಿಂದ ರಸ್ತೆ ದಾಟಿದ ಹುಲಿಯ ದೃಶ್ಯವನ್ನು ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.
ಮೈಸೂರು, ಏಪ್ರಿಲ್ 23: ಮೈಸೂರಿನ ಕಾರಾಪುರ ಜಂಗಲ್ ರೆಸಾರ್ಟ್ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಯ ದರ್ಶನವಾಗಿದೆ. ಸಫಾರಿ ವಾಹನಗಳು ರಸ್ತೆಯಲ್ಲಿದ್ದರೂ ಸಹ ಯಾವುದಕ್ಕೂ ಅಂಜದ ಹುಲಿ, ಅತ್ಯಂತ ಗಾಂಭಿರ್ಯದಿಂದ ರಸ್ತೆಯಲ್ಲೇ ನಡೆದು ಬಂದಿದೆ. ವಾಹನಗಳ ನಡುವೆಯೇ ರಸ್ತೆ ದಾಟಿ ನಂತರ ನಿಧಾನವಾಗಿ ಕಾಡಿನೊಳಗೆ ಮರೆಯಾಗಿದೆ. ಸಫಾರಿಗೆ ತೆರಳಿದ್ದ ಮೈಸೂರಿನ ನಿವಾಸಿ ಸೌಮ್ಯ ಪ್ರಕಾಶ್ ಎಂಬುವವರು ಈ ಸುಂದರ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿಯನ್ನು ಇಷ್ಟು ಹತ್ತಿರದಿಂದ ಕಂಡ ಪ್ರವಾಸಿಗರು ಪುಳಕಿತಗೊಂಡಿದ್ದಾರೆ. ಸದ್ಯ, ಸೌಮ್ಯ ಪ್ರಕಾಶ್ ಸೆರೆಹಿಡಿದಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
