ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ! ಮೈಸೂರಿನಲ್ಲಿ ಮನೆ ಒಳಗಿದ್ದ ನಾಗರಹಾವು ರಕ್ಷಣೆ

Edited By:

Updated on: Apr 23, 2026 | 7:37 AM

ಮೈಸೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಟೆಲಿಕಾಂ ಬಡಾವಣೆ ಸೇರಿದಂತೆ ಹಲವು ಕಡೆ ನಾಗರಹಾವುಗಳು ಮನೆ ಸೇರಿಕೊಳ್ಳುತ್ತಿವೆ. ಬಲೆಗೆ ಸಿಲುಕಿ ನರಳಾಡುತ್ತಿದ್ದ ಹಾವನ್ನು ಉರಗ ತಜ್ಞ ಸ್ನೇಕ್ ಶ್ಯಾಮ್ ರಕ್ಷಿಸಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಮನೆಯೊಂದರ ಹಾಲ್​ನ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತ ನಾಗರ ಹಾವಿನ ವಿಡಿಯೋ ಇಲ್ಲಿದೆ ನೋಡಿ.

ಮೈಸೂರು, ಏಪ್ರಿಲ್ 23: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆಯೇ, ತಂಪಾದ ಜಾಗ ಅರಸುತ್ತಾ ವಿಷಕಾರಿ ಹಾವುಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ನಗರದ ಟೆಲಿಕಾಂ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿವೆ. ನಗರದ ಟೆಲಿಕಾಂ ಬಡಾವಣೆಯ ಮನೆಯೊಂದರ ಒಳಗೆ ಹಾಲ್​ನಲ್ಲಿ ನೇತುಹಾಕಿದ್ದ ಹ್ಯಾಂಗಿಂಗ್​ನಲ್ಲಿ ನಾಗರಹಾವು ಕುಳಿತಿದ್ದು ನೋಡಿ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಮತ್ತೊಂದೆಡೆ, ಅದೇ ಬಡಾವಣೆಯ ಮನೆಯೊಂದರ ಕಾಂಪೌಂಡ್‌ನಲ್ಲಿ ಹಾಕಲಾಗಿದ್ದ ಬಲೆಗೆ ನಾಗರಹಾವೊಂದು ಸಿಲುಕಿ ನರಳಾಡುತ್ತಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್, ಅತ್ಯಂತ ಜಾಗರೂಕತೆಯಿಂದ ಹಾವನ್ನು ಬಲೆಯಿಂದ ಮುಕ್ತಗೊಳಿಸಿ ರಕ್ಷಿಸಿದ್ದಾರೆ. ಬಿಸಿಲಿನ ಬೇಗೆ ತಾಳಲಾರದೆ ಹಾವುಗಳು ಮನೆಗಳ ಒಳಗೆ, ಶೂ ಸ್ಟ್ಯಾಂಡ್ ಹಾಗೂ ತಂಪಾದ ಮೂಲೆಗಳಲ್ಲಿ ಆಶ್ರಯ ಪಡೆಯುತ್ತಿವೆ.

ಬೇಸಿಗೆಯ ಈ ಸಮಯದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ಹಾವುಗಳು ಕಂಡುಬಂದಲ್ಲಿ ಸ್ವತಃ ಹಿಡಿಯಲು ಮುಂದಾಗದೆ ತಜ್ಞರಿಗೆ ಮಾಹಿತಿ ನೀಡಬೇಕು ಎಂದು ಸ್ನೇಕ್ ಶ್ಯಾಮ್ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More