ಮೈಸೂರಿನಲ್ಲಿ ಯಶ್ ರಾಕಿಂಗ್; ನೆಚ್ಚಿನ ನಟನಿಗೆ ಶಿಳ್ಳೆ, ಕೇಕೆಗಳ ಸುರಿಮಳೆಗೈದ ಜನರು

Edited By:

Updated on: Aug 11, 2022 | 1:55 PM

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ ಯುವಜನ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಭಾಗಿಯಾದರು. ಸ್ಯಾಂಡವುಡ್ ನಟ ರಾಕಿಂಗ್ ಸ್ಟಾರ್ ಯಶ್ ವೇದಿಕೆ ಮೇಲೆ ಬರುತ್ತಿದ್ದಂತೆ ಜನರು ಹುಚ್ಚೆದ್ದು ಕುಣಿದು ಶಿಳ್ಳೆ, ಕೇಕೆಗಳ ಸುರಿಮಳೆ ಗೈದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ ಯುವಜನ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಸ್ಯಾಂಡವುಡ್ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಸೇರಿದಂತೆ ಅನೇಕರು ಭಾಗಿಯಾದರು. ಕೈಬೀಸುತ್ತಾ ವೇದಿಕೆ ಮೇಲೆ ಆಗಮಿಸಿದ ಯಶ್​ ಕೈಗೆ ವೇದಿಕೆಯಲ್ಲಿ ರಾಷ್ಟ್ರಧ್ವಜವನ್ನು ನೀಡಲಾಯಿತು. ಈ ವೇಳೆ ಜನರು ಹುಚ್ಚೆದ್ದು ಕುಣಿದಿದ್ದು, ಶಿಳ್ಳೆ, ಕೇಕೆಗಳ ಸುರಿಮಳೆ ಗೈದಿದ್ದಾರೆ. ಕಾರ್ಯಕ್ರಮದ ಆಕರ್ಷಣೆಯ ಕೇಂದ್ರವಾಗಿದ್ದ ರಾಕಿಬಾಯ್​ ಜೊತೆ ಮಾತನಾಡಲು ಲೇಡಿ ಫ್ಯಾನ್ ಒಬ್ಬರು ಆಗಮಿಸಿದ್ದು, ಅಭಿಮಾನಿಯೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ