MySugar: ಮೈಶುಗರ್ ಸಕ್ಕರೆ ಕಾರ್ಖಾನೆ ಪುನರಾರಂಭ ಸಜ್ಜು; ಮಂಡ್ಯದ ಜನತೆಗೆ ಫುಲ್ ಖುಷ್
ರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ (Mysugar factory) ಕಾರ್ಖಾನೆ ಆ.17 ಅಥವಾ 18ಕ್ಕೆ ಅಧಿಕೃತವಾಗಿ ಪುನರಾರಂಭವಾಗುವ ಸಾಧ್ಯತೆ ಇದೆ.
ಮಂಡ್ಯ: ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ (Mysugar factory) ಕಾರ್ಖಾನೆ ಆ.17 ಅಥವಾ 18ಕ್ಕೆ ಅಧಿಕೃತವಾಗಿ ಪುನರಾರಂಭವಾಗಲು ಸಜ್ಜಾಗುತ್ತಿದೆ. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಂದಲೇ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗುತ್ತಿದೆ. 4 ವರ್ಷಗಳ ಬಳಿಕ ಕಾರ್ಖಾನೆಯಲ್ಲಿ ಯಂತ್ರಗಳ ಸದ್ದು ಮಾಡಲು ಸಿದ್ಧವಾಗಿವೆ. ಇಂದು ಕಾರ್ಖಾನೆಯಲ್ಲಿ ಪೂಜೆ, ಹೋಮ-ಹವನ ನಡೆದಿದ್ದು, ಬಾಯ್ಲರ್ಗೆ ಅಗ್ನಿ ಸ್ಪರ್ಶ ಕೂಡ ನಡೆದಿದೆ. ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಗೋಪಾಲಯ್ಯ, ಕ್ರೀಡಾ ಸಚಿವ ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಷ್, ಜಿಲ್ಲಾಧಿಕಾರಿ ಸೇರಿದಂತೆ ಮತ್ತಿತರರು ಭಾಗಿಯಾದರು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ನಡೆದ ಸಾಕಷ್ಟು ಹೋರಾಟಗಳಿಗೆ ಮಣಿದ ರಾಜ್ಯ ಸರ್ಕಾರ, ಕಾರ್ಖಾನೆ ಪುನರಾರಂಭದ ಭರವಸೆ ನೀಡಿತ್ತು. ಅದರಂತೆ ಮೈಶುಗರ್ ಪುನರಾರಂಭಕ್ಕೆ ಸಜ್ಜಾಗಿದೆ. ಈ ಬಗ್ಗೆ ಟಿವಿ9 ಪ್ರತಿನಿಧಿ ಸೂರಜ್ ನೀಡಿರುವ ವಿಶೇಷ ವರದಿ ಇಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ