ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

Edited By:

Updated on: Sep 14, 2026 | 11:06 AM

ನಾಡಿನಾದ್ಯಂತ ಗಣೇಶ ಚತುರ್ಥಿಯ ಸಡಗರ ಜೋರಾಗಿದ್ದು, ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಾಲಯದಲ್ಲಿ ಭಕ್ತರ ಸಾಗರವೇ ನೆರೆದಿದೆ. ಏಕಕಾಲಕ್ಕೆ 101 ಗಣಪತಿಗಳ ದರ್ಶನ ಹಾಗೂ ನಕ್ಷತ್ರ ಗಣಪತಿ ಪೂಜೆಯ ವಿಶೇಷತೆಯಿಂದ ಈ ದೇವಾಲಯವು ಗಮನ ಸೆಳೆದಿದೆ. ವಿವಿಧ ಅಭಿಷೇಕಗಳು ಮತ್ತು ಮಹಾಮಂಗಳಾರತಿಯೊಂದಿಗೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಮೈಸೂರು, ಸೆಪ್ಟೆಂಬರ್ 14: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮೈಸೂರಿನ ಅಗ್ರಹಾರದಲ್ಲಿರುವ ಐತಿಹಾಸಿಕ ‘101 ಗಣಪತಿ ದೇವಾಲಯ’ವು ಈ ಬಾರಿ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ. ಈ ದೇವಾಲಯದಲ್ಲಿ ಏಕಕಾಲಕ್ಕೆ 101 ಗಣಪತಿ ವಿಗ್ರಹಗಳ ದರ್ಶನವನ್ನು ಪಡೆಯುವ ಅವಕಾಶವಿದೆ. ಗಣೇಶ ಚತುರ್ಥಿಯ ದಿನ 101 ಗಣಪತಿಯ ದರ್ಶನ ಪಡೆದರೆ ಎಲ್ಲವೂ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ವಿಘ್ನನಿವಾರಕ ವಿನಾಯಕನ ದರ್ಶನ ಪಡೆಯುತ್ತಿದ್ದಾರೆ. ಪುಷ್ಪಗಳಿಂದ ಮತ್ತು ಕರ್ಜಿಕಾಯಿ ಹಾರದಿಂದ ಗಣಪತಿಯನ್ನು ಅಲಂಕರಿಸಲಾಗಿದೆ. ದೇವಾಲಯದ ಮತ್ತೊಂದು ವಿಶೇಷವೆಂದರೆ ಇಲ್ಲಿ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ನಕ್ಷತ್ರ ಗಣಪತಿ ಪೂಜೆಗೆ ಅವಕಾಶವಿದೆ. ಉದಾಹರಣೆಗೆ, ಅಶ್ವಿನಿ ನಕ್ಷತ್ರಕ್ಕೆ ದ್ವಿಜ ಗಣಪತಿ, ಭರಣಿ ನಕ್ಷತ್ರಕ್ಕೆ ಸಿದ್ದಿ ಗಣಪತಿ ಹೀಗೆ ಒಟ್ಟು 27 ನಕ್ಷತ್ರಗಳಿಗೆ ಬೇರೆ ಬೇರೆ ಗಣಪತಿಗಳು ಇರುವುದು ಭಕ್ತರನ್ನು ಆಕರ್ಷಿಸಿದೆ. ಈ ಅನನ್ಯ ವೈಶಿಷ್ಟ್ಯಗಳು ಮೈಸೂರಿನ 101 ಗಣಪತಿ ದೇವಾಲಯವನ್ನು ಗಣೇಶ ಹಬ್ಬದಂದು ಭಕ್ತರಿಗೆ ಪ್ರಮುಖ ಧಾರ್ಮಿಕ ತಾಣವನ್ನಾಗಿ ಮಾಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us