New Year 2024: ಮೈಸೂರು ಅರಮನೆಯಲ್ಲಿ ಹೊಸವರ್ಷಾಚರಣೆಗೆ ಸಿದ್ಧತೆ ಹೇಗಿದೆ?

New Year 2024: ಮೈಸೂರು ಅರಮನೆಯಲ್ಲಿ ಹೊಸವರ್ಷಾಚರಣೆಗೆ ಸಿದ್ಧತೆ ಹೇಗಿದೆ?

ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on:Dec 31, 2023 | 12:34 PM

ಹೊಸ ವರ್ಷಾಚರಣೆಗೆ ಅರಮನೆ ನಗರಿಯಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಬಣ್ಣ ಬಣ್ಣದ ದೀಪಾಲಂಕಾರ, ಮಿಂಚು ಹರಿಸುತ್ತಿರುವ ಲೈಟುಗಳು, ಕಣ್ಣು ಕುಕ್ಕುವ ಲೇಸರ್ ಲೈಟ್‌ಗಳು, ಭರ್ಜರಿ ಮ್ಯೂಸಿಕ್ ಸಾಂಸ್ಕೃತಿಕ ನಗರಿ‌ ಮೈಸೂರಿನ ವಿಜಯನಗರದಲ್ಲಿರುವ ಪೆಗ್ಸ್ ಅಂಡ್ ಕೆಗ್ಸ್ ಪಬ್‌ 2023ಕ್ಕೆ ಗುಡ್ ಬೈ ಹೇಳಿ 2024ಕ್ಕೆ ವೆಲ್‌ಕಮ್ ಮಾಡಿಕೊಳ್ಳಲು ಸಿದ್ದವಾಗಿದೆ.

ಮೈಸೂರು, ಡಿ.31: ಮೈಸೂರು ಅರಮನೆಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಪುಷ್ಪಲಂಕಾರ ಮಾಡಲಾಗಿದೆ. ಬಣ್ಣ ಬಣ್ಣದ ಹೂಗಳಿಂದ ಮೈಸೂರು ಅರಮನೆ ಕಂಗೊಳಿಸುತ್ತಿದೆ. ವಿಶೇಷ ಅಂದ್ರೆ, ಅರ್ಜುನ ಅನೆಗೂ ಗೌರವ ಸಲ್ಲಿಸಲಾಗಿದ್ದು, ಹೂವುಗಳಿಂದ ಆನೆಯ ಪ್ರತಿಕೃತಿ ಮಾಡಲಾಗಿದೆ. ನೂತನ ವರ್ಷದ ಸಂಭ್ರಮಚಾರಣೆಯ ಅಂಗವಾಗಿ ಮೈಸೂರು ಅರಮನೆಯಲ್ಲಿ ಫ್ಲವರ್ ಶೋ ಆಯೋಜಿಸಲಾಗಿದೆ. ಮಾಗಿ ಉತ್ಸವದ ಸಂಭ್ರಮಮಲ್ಲಿ ಅರಮನೆ ಕಂಗೊಳಿಸುತ್ತಿದೆ. ಇನ್ನೂ ಸಂಜೆ 7 ಗಂಟೆಗೆ ಪೊಲೀಸ್ ಬ್ಯಾಂಡ್ ಫಲಪುಷ್ಪ ಪ್ರದರ್ಶನಕ್ಕೆ ರಂಗು ತುಂಬಲಿದೆ. ರಾತ್ರಿ 12ಗಂಟೆಗೆ ಅರಮನೆಯಲ್ಲಿ ವಿದ್ಯುತ್ ದೀಪಾಲಂಕಾರ ಬೆಳಗುವ ಮೂಲಕ ಹೊಸ ವರ್ಷವನ್ನ ಬರಮಾಡಿಕೊಳ್ಳಲಾಗುತ್ತೆ.

ಇದೇ ಫ್ಲವರ್ ಶೋನಲ್ಲಿ ಅರ್ಜುನ ಆನೆಯನ್ನ ಸ್ಮರಿಸಲಾಗಿದೆ. ಕಾಡಾನೆ ಜೊತೆ ಕಾಳಗದಲ್ಲಿ ಮೃತಪಟ್ಟ ಅರ್ಜುನ ಆನೆಯ ಪ್ರತಿಕೃತಿ ಮಾಡಲಾಗಿದ್ದು, ಹೂವುಗಳಿಂದ ಅಲಂಕರಿಸಲಾಗಿದೆ. ಸುಮಾರು 10 ಅಡಿ ಎತ್ತರದ ಅರ್ಜುನ ಆನೆಯ ಪ್ರತಿರೂಪ ಎಲ್ಲರ ಗಮನ ಸೆಳೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Dec 31, 2023 11:31 AM