ಚೆನ್ನೈ ಬಳಿ ಮೈಸೂರು-ದರ್ಭಂಗ ರೈಲು ಅಪಘಾತ, ಹಲವರಿಗೆ ಗಾಯ, 9 ಜನರ ಸ್ಥಿತಿ ಗಂಭೀರ
ನಮ್ಮ ವರದಿಗಾರರ ಹೇಳುವ ಪ್ರಕಾರ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ರೇಲ್ವೇ ಪೊಲೀಸ್ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಹವಾನಿಯಂತ್ರಿತ ಬೋಗಿಗಳು ಹಳಿ ಬಿಟ್ಟಿದ್ದು ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಜನ ಗಾಯಗೊಂಡಿದ್ದಾರೆ.
ಚೆನೈ: ಮೈಸೂರು ನಗರದಿಂದ ಹೊರಟ ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್ಪ್ರೆಸ್ ಟ್ರೈನು ಕಳೆದ ರಾತ್ರಿ ಸುಮಾರು 9 ಗಂಟೆಗೆ ಚೆನೈ ನಗರಕ್ಕೆ ಹತ್ತಿರವಿರುವ ಕವರಪೆಟ್ಟೈ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲೊಂದಕ್ಕೆ ಢಿಕ್ಕಿ ಹೊಡೆದ ಪರಣಾವಾಗಿ ಪ್ಯಾಸೆಂಜರ್ ಟ್ರೈನಿನ 6 ಬೋಗಿಗಳು ಹಳಿ ತಪ್ಪಿವೆ. ಸ್ಥಳಕ್ಕೆ ತಲುಪಿರುವ ನಮ್ಮ ವರದಿಗಾರ ನೀಡುವ ಮಾಹಿತಿ ಪ್ರಕಾರ ಅಪಘಾತದಲ್ಲಿ ಹಲವು ಜನ ಗಾಯಗೊಂಡಿದ್ದು ಅವರಲ್ಲಿ 9 ಜನಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಚೆನ್ನೈನ ಸ್ಟ್ಯಾನ್ಲಿ ಆಸ್ಪತ್ರೆ ದಾಖಲಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯವಾಡ ಭೇಟಿ ವೇಳೆ ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾದ ಸಿಎಂ ಚಂದ್ರಬಾಬು ನಾಯ್ಡು