ಅರಮನೆ ನಗರಿಯಲ್ಲಿ ಇಂದು ದಸರಾಗೆ ಚಾಲನೆ, ಸಿಂಪಲ್ ನಾಡಹಬ್ಬಕ್ಕೆ ತಯಾರಾದ ಮೈಸೂರು
ಮೈಸೂರು: ದಸಾರ ಅಂದ್ರೆ ಅದೇನೋ ಸಡಗರ, ಸಂಭ್ರಮ, ಇಡೀ ವಿಶ್ವವೇ ತಿರುಗಿನೋಡುವಂತಹ ಖದರ್ ಮೈಸೂರು ದಸಾರಕ್ಕೆ ಇದೆ. ಆದ್ರೆ ಕೊರೊನಾದಿಂದಾಗಿ ಈ ಬಾರಿ ಸರಳ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೊರೊನಾ ವೈರಸ್‌ನಿಂದಾಗಿ ಸಿಂಪಲ್ ಆಗಿ ದಸರಾ ಆಚರಿಸಲು ಜಿಲ್ಲಾಡಳಿತ ಸರ್ವಸನ್ನದ್ದವಾಗಿದೆ. ಮೈಸೂರು ದಸರಾ.. ಎಷ್ಟೊಂದು ಸುಂದರ.. ಹೌದು ಈ ಸಾಲುಗಳೇ ನಾಡಹಬ್ಬದ ಸೊಬಗನ್ನ ಸಾರಿ ಸಾರಿ ಹೇಳುತ್ತೆ. ಆದ್ರೆ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ […]
ಮೈಸೂರು: ದಸಾರ ಅಂದ್ರೆ ಅದೇನೋ ಸಡಗರ, ಸಂಭ್ರಮ, ಇಡೀ ವಿಶ್ವವೇ ತಿರುಗಿನೋಡುವಂತಹ ಖದರ್ ಮೈಸೂರು ದಸಾರಕ್ಕೆ ಇದೆ. ಆದ್ರೆ ಕೊರೊನಾದಿಂದಾಗಿ ಈ ಬಾರಿ ಸರಳ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೊರೊನಾ ವೈರಸ್‌ನಿಂದಾಗಿ ಸಿಂಪಲ್ ಆಗಿ ದಸರಾ ಆಚರಿಸಲು ಜಿಲ್ಲಾಡಳಿತ ಸರ್ವಸನ್ನದ್ದವಾಗಿದೆ.
ಮೈಸೂರು ದಸರಾ.. ಎಷ್ಟೊಂದು ಸುಂದರ.. ಹೌದು ಈ ಸಾಲುಗಳೇ ನಾಡಹಬ್ಬದ ಸೊಬಗನ್ನ ಸಾರಿ ಸಾರಿ ಹೇಳುತ್ತೆ. ಆದ್ರೆ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ತುಂಬಾ ಸಿಂಪಲ್ ಆಗಿ ಇರಲಿದೆ. ಕೊರೊನಾ ಮಹಾಮಾರಿಯ ಕಾರ್ಮೋಡದಿಂದಾಗಿ ಸಿಂಪಲ್ ದಸರಾಗೆ ಇವತ್ತು ಚಾಲನೆ ಸಿಗಲಿದೆ. ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿಬೆಟ್ಟದಲ್ಲಿ ಸರಳಾ ದಸರೆಗೆ ಚಾಲನೆ ಸಿಗಲಿದೆ.
ಬೆಳಗ್ಗೆ 7.45 ರಿಂದ 8.15 ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಸಿಎಂ ಬಿಎಸ್ ಯಡಿಯೂರಪ್ಪ ಸೇರಿ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ದಸರಾ ಉದ್ಘಾಟನೆ ಮಾಡಲಿದ್ದಾರೆ.
ಎಸ್.ಟಿ.ಸೋಮಶೇಖರ್ ಪರಿಶೀಲನೆ ಇನ್ನು ದಸರಾ ಸಿದ್ಧತೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲನೆ ನಡೆಸಿದ್ರು. ಅರಮನೆ ಹಾಗೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಗಜಪಡೆ ಹಾಗೂ ಮಾವುತರ ಕ್ಷೇಮ ವಿಚಾರಿಸಿದ್ರು. ಆನೆಗಳಿಗೆ ಕಬ್ಬು-ಬೆಲ್ಲ ತಿನ್ನಿಸಿ ಶುಭ ಹಾರೈಸಿದ್ರು. ಕೊವಿಡ್ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭಕ್ಕೆ ಕೇವಲ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಿಗದಿತ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇಂದು ನಾಡದೇವಿ ಚಾಮುಂಡೇಶ್ವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಂತರ ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನವರಾತ್ರಿಯ 9 ದಿನಗಳೂ ನಾಡದೇವಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಲಿದೆ.
ಇನ್ನು ಮೈಸೂರು ಅರಮನೆಯ ಸಾಂಪ್ರದಾಯಿಕ ದಸರಾ ಆಚರಣೆಯೂ ಸರಳವಾಗಿ ನಡೆಯಲಿದೆ. ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ದೊರೆಯುವ ಸಮಯದಲ್ಲೇ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಆರಂಭವಾಗಲಿದೆ. ಯದುವಂಶದ ಅರಸ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೂಢರಾಗಿ ಸಾಂಪ್ರದಾಯಿಕವಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಾಲನೆ ದಸರಾ ಅಂಗವಾಗಿ ಇಂದು ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಾಲನೆ ದೊರೆಯಲಿದೆ.ಸರಳ ದಸರಾ ಆದ್ರೂ ಸಹ ಮೈಸೂರು ನವ ವಧುವಿನಂತೆ ಸಿಂಗಾರಗೊಂಡಿದೆ. ದೀಪಾಲಂಕಾರಗಳು ಭರ್ಜರಿಯಾಗಿದೆ. ಪ್ರಮುಖ ರಸ್ತೆಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿದೆ. ಸಾಂಸ್ಕೃತಿಕ ನಗರಿಯ ಪ್ರಮುಖ ವೃತ್ತಗಳಿಗೂ ಸಹ ದೀಪಾಲಂಕಾರ ಮಾಡಲಾಗಿದೆ. ಒಟ್ನಲ್ಲಿ ದಸರಾ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಡಹಬ್ಬ ಸುಸೂತ್ರವಾಗಿ ಅಗಲಿ ಅನ್ನೋದೆ ಎಲ್ಲರ ಆಶಯ.
Published On - 6:45 am, Sat, 17 October 20