ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮರುಕಳಿಸಿದ ರಾಜರ ಗತ ವೈಭವದ ಸುಂದರ ದೃಶ್ಯ ಹೇಗಿದೆ ನೋಡಿ

Updated on: Sep 22, 2025 | 6:30 PM

ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್‌ ನಡೆಯಲಿದೆ. ಇಂದಿನಿಂದ ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್‌ ಆರಂಭವಾಗಿದ್ದು, ಈಗಾಗಗಲೇ ಅರಮನೆ ದರ್ಬಾರ್‌ ಹಾಲ್‌ನಲ್ಲಿ ರಾಜರ ಗತ ವೈಭವದ ದೃಶ್ಯ ಮೇಳೈಸಿದೆ. ಈ ಸುಂದರ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಿ.

ಮೈಸೂರು, ಸೆಪ್ಟೆಂಬರ್‌ 22: ನಾಡಹಬ್ಬ ದಸರಾ  (Mysuru Dasara) ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಜೊತೆಗೆ ಅರಮನೆಯಲ್ಲಿ ರಾಜವಂಶಸ್ಥರಿಂದ ಸಾಂಪ್ರದಾಯಿಕ ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದೆ.  ಅದೇ ರೀತಿ ದಸರಾ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ಗೂ ವಿಧ್ಯುಕ್ತ ಚಾಲನೆ ದೊರಕಿದೆ. ದರ್ಬಾರ್‌ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನವನ್ನೇರಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ರಾಜ ಪೋಷಾಕು ಧರಿಸಿ ದರ್ಬಾರ್‌ ನಡೆಸುತ್ತಾರೆ. ಈಗಾಗಲೇ ಅಂಬಾವಿಲಾಸ ದರ್ಬಾರ್‌ ಹಾಲ್‌ನಲ್ಲಿ ರಾಜ ಪರಂಪರೆಯ ಗತ ವೈಭವದ ಸುಂದರ ದೃಶ್ಯ ಮೇಳೈಸಿದ್ದು, ಈ ಕುರಿತ ಸುಂದರ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ