ಮೈಸೂರು ದಸರಾ 2025 : ಪೊಲೀಸ್​ ಬಿಗಿ ಭದ್ರತೆ; ಪಾಸ್​ ಇಲ್ಲದಿದ್ದರೆ ನೋ ಎಂಟ್ರಿ!

Updated on: Sep 30, 2025 | 3:36 PM

ಅಕ್ಟೋಬರ್ 2 ರಂದು ನಡೆಯುವ ಜಂಬೂ ಸವಾರಿಯ ನಿಮಿತ್ತ ಗಜಪಡೆ, ಕುದುರೆಗಳು ಸೇರಿದಂತೆ ವಿವಿಧ ಪೊಲೀಸ್ ತುಕಡಿಗಳು ಪೂರ್ವಾಭ್ಯಾಸ ನಡೆಸುತ್ತಿವೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳೆರಡೂ ಈ ತಾಲೀಮಿನಲ್ಲಿ ಭಾಗವಹಿಸಿವೆ. ಜಂಬೂ ಸವಾರಿಯಲ್ಲಿ ನಡೆಯಲಿರುವ ಕಾರ್ಯಗಳ ಸಿದ್ಧತೆ ಅಂತಿಮ ಘಟ್ಟಕ್ಕೆ ತಲುಪಿದೆ. ಸಾರ್ವಜನಿಕರಿಗೆ ಕೇವಲ ಪಾಸ್​ಗಳ ಮೂಲಕ ಪ್ರವೇಶ ನೀಡಲಿದ್ದು, ಬಿಗಿ ಪೊಲೀಸ್ ಭದ್ರತೆಯಿರಲಿದೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಮೈಸೂರು, ಸೆಪ್ಟೆಂಬರ್ 30: ಅಕ್ಟೋಬರ್ 2 ರಂದು ನಡೆಯಲಿರುವ ಜಂಬೂಸವಾರಿಯ ಹಿನ್ನೆಲೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂತಿಮ ತಯಾರಿ ನಡೆಸಿದ್ದಾರೆ. ಇಂದಿಗೆ ತಾಲೀಮು ಕೊನೆಗೊಳ್ಳಲಿದ್ದು, ಕಟ್ಟುನಿಟ್ಟಾದ ಪೊಲೀಸ್ ಬಂದೋಬಸ್ತ್ ಇರಲಿದೆ. ಈ ಸಲದ ಎಲ್ಲಾ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಪಾಸ್​ನ ವ್ಯವಸ್ಥೆ ಮಾಡಲಾಗಿದ್ದು, ಪಾಸ್ ಇಲ್ಲದವರನ್ನು ಒಳಗೆ ಬಿಡಲು ಸಾಧ್ಯವಿಲ್ಲವೆಂದು ಪೊಲೀಸ್ ಕಮಿಷನರ್​ ಸೀಮಾ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ