ಇದೇ ಮೊದಲ ಬಾರಿಗೆ ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ಹೇಗಿತ್ತು ನೋಡಿ

Updated on: Oct 21, 2026 | 4:59 PM

ಅರಮನೆ ಹಿಂಭಾಗದಲ್ಲಿ ಪ್ರಶಾಂತನಿಗೆ ಅಂಬಾರಿ ಕಟ್ಟುವ ಕಾರ್ಯ ಅಂತ್ಯವಾಗಿದ್ದು, ಕ್ಯಾಪ್ಟನ್ ಪ್ರಶಾಂತ ಬಣ್ಣಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದಾನೆ. ಕಿವಿಗಳಿಗೆ ಶಂಕ ಚಕ್ರ, ಹಣೆ ಮತ್ತು ಸೊಂಡಿಲ ಮೇಲೆ ಗಂಡಭೇರುಂಡ, ಸೂರ್ಯ ಚಂದ್ರ, ಗಿಳಿಯ ಚಿತ್ತಾರ ಬಿಡಿಸಲಾಗಿದೆ. ಇನ್ನು ಘಂಟೆ, ಚಿನ್ನ ಲೇಪಿತ ಹಣೆಪಟ್ಟಿ, ದಂತಗಳಿಗೆ ಸಿಂಗೋಟಿ ಅಳವಡಿಸಲಾಗಿದೆ. ಸುಮಾರು 750 ಕೆಜಿ ಭಾರ ಹೊತ್ತು ಸಹಸ್ರಾಸರು ಜನರ ನಡುವೆ ಸುಮಾರು ಐದು ಕಿಲೋ ಮೀಟರ್ ಹೆಜ್ಜೆ ಹಾಕಲಿದ್ದಾನೆ. ಇನ್ನು ಇದೇ ಮೊದಲ ಬಾರಿಗೆ ಪ್ರಶಾಂತನಿಗೆ ಅಂಬಾರಿ ಹೊರಿಸುವ ಪ್ರಕ್ರಿಯೆ ಹೇಗಿದೆ ನೋಡಿ.

ಮೈಸೂರು, (ಅಕ್ಟೋಬರ್ 21): ವಿಶ್ವವಿಖ್ಯಾತ ಮೈಸೂರು ದಸರಾ ಜಂಬುಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ದಸರಾ 2026ರ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು 54 ವರ್ಷದ ಹಿರಿಯ ಆನೆ ‘ಪ್ರಶಾಂತ’ನನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಇಂದು ಪ್ರಶಾಂತ ಆನೆ ಬೆನ್ನ ಮೇಲೆ ಚಿನ್ನದ ಅಂಬಾರಿ ಹೊರಿಸಲಾಗಿದೆ. ಅರಮನೆ ಹಿಂಭಾಗದಲ್ಲಿ ಪ್ರಶಾಂತನಿಗೆ ಅಂಬಾರಿ ಕಟ್ಟುವ ಕಾರ್ಯ ಅಂತ್ಯವಾಗಿದ್ದು, ಕ್ಯಾಪ್ಟನ್ ಪ್ರಶಾಂತ ಬಣ್ಣಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದಾನೆ. ಕಿವಿಗಳಿಗೆ ಶಂಕ ಚಕ್ರ, ಹಣೆ ಮತ್ತು ಸೊಂಡಿಲ ಮೇಲೆ ಗಂಡಭೇರುಂಡ, ಸೂರ್ಯ ಚಂದ್ರ, ಗಿಳಿಯ ಚಿತ್ತಾರ ಬಿಡಿಸಲಾಗಿದೆ. ಇನ್ನು ಘಂಟೆ, ಚಿನ್ನ ಲೇಪಿತ ಹಣೆಪಟ್ಟಿ, ದಂತಗಳಿಗೆ ಸಿಂಗೋಟಿ ಅಳವಡಿಸಲಾಗಿದೆ. ಸುಮಾರು 750 ಕೆಜಿ ಭಾರ ಹೊತ್ತು ಸಹಸ್ರಾಸರು ಜನರ ನಡುವೆ ಸುಮಾರು ಐದು ಕಿಲೋ ಮೀಟರ್ ಹೆಜ್ಜೆ ಹಾಕಲಿದ್ದಾನೆ. ಇನ್ನು ಇದೇ ಮೊದಲ ಬಾರಿಗೆ ಪ್ರಶಾಂತನಿಗೆ ಅಂಬಾರಿ ಹೊರಿಸುವ ಪ್ರಕ್ರಿಯೆ ಹೇಗಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 21, 2026 04:14 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More