7ಕ್ಕೂ ಹೆಚ್ಚು ಫಿರಂಗಿಗಳ ಮೂಲಕ ಮೈಸೂರು ದಸರಾ ಸಿಡಿಮದ್ದು ತಾಲೀಮು: ತುಸು ವಿಚಲಿತಗೊಂಡ ಶ್ರೀಕಂಠ, ಹೇಮಾವತಿ ಆನೆಗಳು

Updated on: Sep 15, 2025 | 12:10 PM

ದಸರಾ ಪ್ರಯುಕ್ತ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಸೋಮವಾರ ಕುಶಾಲತೋಪು ತಾಲೀಮು ನಡೆಯಿತು. ಇದರಲ್ಲಿ ಒಟ್ಟು 14 ಆನೆಗಳು ಭಾಗಿಯಾದವು. ಅಭಿಮನ್ಯು, ಧನಂಜಯ, ಕಾವೇರಿ, ಲಕ್ಷ್ಮೀ, ಭೀಮ, ಏಕಲವ್ಯ, ರೂಪಾ, ಕಂಜನ್, ಮಹೇಂದ್ರ, ಪ್ರಶಾಂತ, ಶ್ರೀಕಂಠ, ಸುಗ್ರೀವ, ಗೋಪಿ, ಹೇಮಾವತಿ ಆನೆಗಳು ಭಾಗವಹಿಸಿದವು.

ಮೈಸೂರು, ಸೆಪ್ಟೆಂಬರ್ 15: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025 ಪ್ರಯುಕ್ತ ಅಶ್ವಾರೋಹಿ ದಳ ಮತ್ತು ಆನೆಗಳಿಗೆ ಸೋಮವಾರ ಸಿಡಿಮದ್ದು ತಾಲೀಮು ನಡೆಸಲಾಯಿತು. ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನೆರವೇರಿತು. ಸಶಸ್ತ್ರ ಮೀಸಲು ಪಡೆ ಪೊಲೀಸರು 21 ಬಾರಿ ಕುಶಾಲತೋಪು ಸಿಡಿಸಿದರು. ಇದೇ ವೇಳೆ, ದಸರಾ ಆನೆಗಳಿಗೆ ವಸ್ತುಪ್ರದರ್ಶನ ಪ್ರಾಧಿಕಾರದಿಂದ ಪೂಜೆ ಸಲ್ಲಿಸಲಾಯಿತು. ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಪುಷ್ಪಾರ್ಚನೆ ಮಾಡಿದರು. ಶ್ರೀಕಂಠ, ಹೇಮಾವತಿ ಆನೆಗಳು ಸಿಡಿಮದ್ದು ಶಬ್ದಕ್ಕೆ ಸ್ವಲ್ಪ ವಿಚಲಿತಗೊಂಡವು. ಈ ಆನೆಗಳು ಇದೇ ಮೊದಲ ಬಾರಿಗೆ ದಸರಾಗೆ ಆಗಮಿಸಿವೆ. ಸಿಡಿಮದ್ದು ತಾಲೀಮಿಗೂ ಮುನ್ನ ದಸರಾ ಆನೆಗಳ ಮುಂದೆ ಭಾರಿ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಸಿದ್ಧಗೊಳಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ