ಮೈಸೂರು ದಸರಾ ಮಹೋತ್ಸವ 2025: ಜಂಬೂ ಸವಾರಿಗಾಗಿ ತಾಲೀಮು ಆರಂಭಿಸಿದ ಗಜಪಡೆ

Updated on: Aug 11, 2025 | 11:06 AM

ರವಿರಾರ ಆನೆಗಳ ತೂಕವನ್ನು ಪರಿಶೀಲನೆ ಮಾಡಲಾಗಿದ್ದು ನಾಯಕ ಅಭಿಮನ್ಯು ಬರೋಬ್ಬರಿ 5,360 ಕೇಜಿ ತೂಗಿದ್ದಾನೆ. ಆದರೆ ಅವನೇ ಎಲ್ಲರಿಗಿಂತ ಭಾರವಾಗಿದ್ದಾನೆ ಅಂತ ಭಾವಿಸಬೇಡಿ. ಭೀಮ ತನ್ನ ಹೆಸರಿಗನುಗುಣವಾಗಿ 5,465 ಕೇಜಿ ಭಾರ ಇದ್ದಾನೆ. ಅಭಿಮನ್ಯುಗಿಂತ ಧನಂಜಯ ಕೇವಲ 50 ಕೇಜಿ ಕಮ್ಮಿ ಇದ್ದಾನೆ. ಇನ್ನು ಮೇಲೆ, ಅರಮನೆ ಆವರಣದಲ್ಲಿ ಆನೆಗಳಿಗೆ ಅವುಗಳ ದೇಹತೂಕಕ್ಕೆ ಅನುಗುಣವಾಗಿ ಪೌಷ್ಠಿಕ ಆಹಾರ ನೀಡಲಾಗುತ್ತದೆ.

ಮೈಸೂರು, ಆಗಸ್ಟ್ 11: ದಸರಾ ಹಬ್ಬಕ್ಕೆ ಇನ್ನೂ ಸಮಯ ಇರೋದು ನಿಜ, ಅದರೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara Mahotsav) ಬೇರೆ ಬೇರೆ ಶಿಬಿರಗಳಿಂದ ಆನೆಗಳು ಆಗಮಿಸಿ ಅರಮನೆ ಆವರಣವನ್ನು ಪ್ರವೇಶಿಸಿವೆ. ಅಲಂಕೃತಗೊಂಡಿರುವ ಆನೆಗಳು ತಾಲೀಮಿಗಾಗಿ ಸಾಕಷ್ಟು ಭದ್ರತೆಯೊಂದಿಗೆ ಅರಮಮೆಯಿಂದ ನಗರ ಪ್ರದೇಶಕ್ಕೆ ಹೊರಬೀಳುತ್ತಿರುವುದನ್ನು ಇಲ್ಲಿ ನೋಡಬಹುದು. ಕ್ಯಾಪ್ಟನ್ ಅಭಿಮನ್ಯು ಟೀಮನ್ನು ಲೀಡ್ ಮಾಡುತ್ತಿದ್ದಾನೆ. ನಮ್ಮ ವರದಿಗಾರ ನೀಡುವ ಮಾಹಿತಿಯ ಪ್ರಕಾರ ಅಭ್ಯಾಸದ ಭಾಗವಾಗಿ ಆನೆಗಳು ಬೆಳಗ್ಗೆ ಮತ್ತು ಸಾಯಂಕಾಲ ಅರಮನೆಯಿಂದ ಬನ್ನಿಮಂಟಪದವರೆಗೆ ನಡೆದು ಬಂದು ಅಲ್ಲಿಂದ ವಾಪಸ್ಸು ಹೋಗುತ್ತವೆ.

ಇದನ್ನೂ ಓದಿ:  ದಸರಾ ಆನೆ ಅಭಿಮನ್ಯುವಿನ ಮಾವುತ ವಸಂತಗೆ ಮುಖ್ಯಮಂತ್ರಿ ಪದಕ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ