Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಉತ್ಸವ-2022: ಅರಮನೆ ಆವರಣದಲ್ಲಿ ಸಂಭ್ರಮದ ಆಯುಧ ಪೂಜೆ ಆಚರಣೆ, ಯದುವೀರರಿಂದ ಪೂಜೆ

ಮೈಸೂರು ದಸರಾ ಉತ್ಸವ-2022: ಅರಮನೆ ಆವರಣದಲ್ಲಿ ಸಂಭ್ರಮದ ಆಯುಧ ಪೂಜೆ ಆಚರಣೆ, ಯದುವೀರರಿಂದ ಪೂಜೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2022 | 2:42 PM

ಯದುವೀರ್ ಅವರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಚಕರಿದ್ದಾರೆ. ಪೂಜಾವಿಧಿಗಳನ್ನು ಅವರು ಅತ್ಯಂತ ತಾಳ್ಮೆ ಮತ್ತು ಹಸನ್ಮುಖ ಭಾವದೊಂದಿಗೆ ನೆರವೇರಿಸುತ್ತಿದ್ದಾರೆ

ಮೈಸೂರು ಅರಮನೆ ಆವರಣದಲ್ಲಿ ಸಂಭ್ರಮ ಸಡಗರಗಳಿಂದ ಆಯಧ ಪೂಜೆಯನ್ನು (Ayudha Puje) ಆಚರಿಸಲಾಗುತ್ತಿದೆ. ಪೂಜೆಯ ಭಾಗವಾಗಿ ಆನೆ, ಹಸು, ಒಂಟೆಗಳನ್ನು ಅರಮನೆಗೆ ಕರೆತರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಯುದ್ಧ ಸಮಯದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಕತ್ತಿ, ಭರ್ಚಿ, ಈಟಿ ಮೊದಲಾದವುಗಳು ಸೇರಿದಂತೆ ಅಂಬಾರಿಗೂ ಯದುವೀರ್ (Yaduveer) ಪೂಜೆ ಸಲ್ಲಿಸುತ್ತಿದ್ದಾರೆ. ಯದುವೀರ್ ಅವರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಚಕರಿದ್ದಾರೆ. ಪೂಜಾವಿಧಿಗಳನ್ನು (worship practices) ಅವರು ಅತ್ಯಂತ ತಾಳ್ಮೆ ಮತ್ತು ಹಸನ್ಮುಖ ಭಾವದೊಂದಿಗೆ ನೆರವೇರಿಸುತ್ತಿದ್ದಾರೆ