ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮತ್ತು ಭಕ್ತಿಪೂರ್ವಕ ಆಯುಧ ಪೂಜೆ

ಪೂಜಾ ಸಮಾರಂಭದಲ್ಲಿ ಸಚಿವ ಮುನಿರತ್ನ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.  

TV9kannada Web Team

| Edited By: Arun Belly

Oct 04, 2022 | 3:15 PM

ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ (BJP office) ಭಕ್ತಿ-ನಿಷ್ಠೆ, ಸಂಭ್ರಮ ಸಡಗರಗಳಿಂದ ಅಯುಧ ಪೂಜೆಯನ್ನು ನೆರವೇರಿಸಲಾಯಿತು. ಮೊದಲು ಕಚೇರಿಯೊಳಗೆ ಪೂಜೆ ಸಲ್ಲಿಸಿದ ಬಳಿಕ ಕಚೇರಿಯ ಎಲ್ಲ ವಾಹನಗಳಿಗೆ ಪೂಜೆ ಮಾಡಲಾಯಿತು. ಪೂಜಾ ಸಮಾರಂಭದಲ್ಲಿ ಸಚಿವ ಮುನಿರತ್ನ (N Munirathna) ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayana Swamy) ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.

Follow us on

Click on your DTH Provider to Add TV9 Kannada