Video: ಬೂದನೂರು ಗ್ರಾಮಕ್ಕೆ ಆನೆ ಬಂತೊಂದಾನೆ, ಹಿಮ್ಮೆಟ್ಟಿಸಲು ಅರಣ್ಯಾಧಿಕಾರಿಗಳ ಹರಸಾಹಸ

| Updated By: Rakesh Nayak Manchi

Updated on: Sep 19, 2022 | 2:53 PM

Mysore News: ಆಹಾರ ಅರಸಿ ಕಾಡಿನಿಂದ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮಕ್ಕೆ ಬಂದ ಆನೆಯೊಂದು ರಾಜಾರೋಷವಾಗಿ ಸುತ್ತಾಡಿದೆ. ಇದನ್ನು ಕಾಡಿಗೆ ಹಿಮ್ಮೆಟ್ಟಿಸಲು ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ.

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮಕ್ಕೆ ಆಹಾರ ಅರಸಿಕೊಂಡು ಕಾಡಿನಿಂದ ಬಂದ ಒಂಟಿ ಸಲಗವೊಂದು ಗ್ರಾಮದಲ್ಲಿ ರಾಜಾರೋಷವಾಗಿ ಸುತ್ತಾಡಿದೆ. ತಡರಾತ್ರಿ ನಾಗರಹೊಳೆ ಅರಣ್ಯದಿಂದ ಬಂದಿರುವ ಈ ಆನೆಯನ್ನು ಕಂಡ ಗ್ರಾಮಸ್ಥರು ಭಯಭೀತರಾದರಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅದರಂತೆ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಲು ಹರಸಾಹಸ ಪಟ್ಟಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಆನೆ ಬೆಸ್ತು ಬೀಳಿಸಿದೆ. ಬೆಳಗಿನ ಒಂಬತ್ತು ಗಂಟೆ ವೇಳೆಗೆ ಕೊನೆಗೂ ಆನೆ ಅರಣ್ಯದ ಕಡೆ ಮುಖಮಾಡಿತು. ಕಾಡಾನೆ ಹಿಮ್ಮೆಟ್ಟಿಸಲು ಹಿಂಡುಹಿಂಡಾಗಿ ಜನರು ಆಗಮಿಸಿದ್ದರು. ಆನೆ ದಾಳಿಯಿಂದ ಗ್ರಾಮದಲ್ಲಿ ಮನೆಗಳು, ಎತ್ತಿನ ಗಾಡಿ ಜಖಂಗೊಂಡಿವೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ