ಪುನಃ ಶುರುವಾದ ತೆರವು ಒತ್ತುವರಿ ಕಾರ್ಯಾಚರಣೆ, ಪ್ರತಿಷ್ಠಿತರು ಮಾಡಿಕೊಂಡಿರುವ ಒತ್ತುವರಿ ತೆರವಾಗುತ್ತಾ?

ಪುನಃ ಶುರುವಾದ ತೆರವು ಒತ್ತುವರಿ ಕಾರ್ಯಾಚರಣೆ, ಪ್ರತಿಷ್ಠಿತರು ಮಾಡಿಕೊಂಡಿರುವ ಒತ್ತುವರಿ ತೆರವಾಗುತ್ತಾ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 19, 2022 | 1:46 PM

ಪಾಲಿಕೆ ಅಧಿಕಾರಿಗಳು ಇದುವರೆಗೆ ಕೇವಲ ಶ್ರೀಮಂತರಲ್ಲದ ಮನೆಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಜಾಗಗಳನ್ನು ಮಾತ್ರ ತೆರವುಗೊಳಿಸಿದ್ದರು. ಇಂದಿನಿಂದ ಉಳ್ಳವರ ಮನೆಗಳ ಒತ್ತುವರಿಯನ್ನು ತೆರವುಗೊಳಿಸುತ್ತಾರಾ ಅನ್ನೋದು ಕಾದು ನೋಡಬೇಕಿದೆ.

ಬೆಂಗಳೂರು: ವಾರಾಂತ್ಯದ ವೇಳೆ ಸ್ತಬ್ಧಗೊಂಡಿದ್ದ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಒತ್ತುವರಿ ತೆರವು ಕಾರ್ಯಾಚರಣೆ (anti-encroachment drive) ಸೋಮವಾರದಿಂದ ಮತ್ತೇ ಆರಂಭಗೊಂಡಿದೆ. ಪಾಲಿಕೆ ಅಧಿಕಾರಿಗಳು ಇದುವರೆಗೆ ಕೇವಲ ಶ್ರೀಮಂತರಲ್ಲದ ಮನೆಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಜಾಗಗಳನ್ನು ಮಾತ್ರ ತೆರವುಗೊಳಿಸಿದ್ದರು. ಇಂದಿನಿಂದ ಉಳ್ಳವರ (influential people) ಮನೆಗಳ ಒತ್ತುವರಿಯನ್ನು ತೆರವುಗೊಳಿಸುತ್ತಾರಾ ಅನ್ನೋದು ಕಾದು ನೋಡಬೇಕಿದೆ. ಏತನ್ಮಧ್ಯೆ, ಮಾರತಹಳ್ಳಿಯಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಸೇತುವೆಯೊಂದನ್ನು ಪಾಲಿಕೆ ಅಧಿಕಾರಿಗಳು ಕೆಡವುತ್ತಿದ್ದಾರೆ.